ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಸ್ ಪಾಸ್ ನವೀಕರಣದ ಅವಧಿ ವಿಸ್ತರಿಸಿ

ಧಾರವಾಡ: ವಿಕಲಚೇತನರ ಬಸ್ ಪಾಸ್ ನವೀಕರಣದ ಅವಧಿಯನ್ನು ಮಾರ್ಚ್-2021ರ ಅಂತ್ಯದವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ, ಗ್ರಾಮೀಣ ಪುನರ್ವಸತಿ ರಾಜ್ಯ ಒಕ್ಕೂಟದ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿಕಲಚೇತನರಿಗಾಗಿ ರಾಜ್ಯ ಸರ್ಕಾರ ರಿಯಾಯ್ತಿ ದರದ ಬಸ್ ಪಾಸ್ ಗಳನ್ನು ಜನೆವರಿ-2021ರಿಂದ ಫೆಬ್ರುವರಿ-2021ರ ಅಂತ್ಯದವರೆಗೆ ಕಾಲಾವಕಾಶ ನೀಡಿದೆ. ಪ್ರಸಕ್ತ ವರ್ಷದಿಂದ ಈ ಯೋಜನೆಯ ಸೌಲಭ್ಯ ಪಡೆಯಲು ಸರ್ಕಾರ ಸೇವಾ ಸಿಂಧು ಮುಖಾಂತರ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಬಸ್ ಪಾಸ್ ಗಳನ್ನು ನವೀಕರಣ ಮಾಡಿಕೊಳ್ಳುವಂತೆ ಆದೇಶಿಸಿದೆ. ಆದರೆ, ಸರ್ವರ್ ಸಮಸ್ಯೆ ಇರುವುದರಿಂದ ಅರ್ಜಿ ಸಲ್ಲಿಸಲು ವ್ಯತ್ಯಯ ಉಂಟಾಗುತ್ತಿದೆ.

ಪಾಸ್ ನವೀಕರಣಕ್ಕೆ ಬೇಕಾಗಿರುವ ದಾಖಲೆಗಳು ಹಾಗೂ ಹೊಸದಾಗಿ ಪಡೆಯುವ ಬಸ್ ಪಾಸಿನ ಬಗ್ಗೆ ದಾಖಲೆಗಳ ಮಾಹಿತಿ ಕೊರತೆಯಿಂದಾಗಿ ಪಾಸ್ ಪಡೆದುಕೊಳ್ಳಲು ಅನಾನುಕೂಲವಾಗುತ್ತಿದೆ. ಆದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್ ನವೀಕರಣ ಮಾಡಿಸಿಕೊಳ್ಳಲು ಅವಧಿ ವಿಸ್ತರಣೆ ಮಾಡಿದ ರೀತಿಯಲ್ಲಿ ವಿಕಲಚೇತನರ ಬಸ್ ಪಾಸ್ ನವೀಕರಣಗೊಳಿಸಲು ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

23/02/2021 01:19 pm

Cinque Terre

27.31 K

Cinque Terre

0

ಸಂಬಂಧಿತ ಸುದ್ದಿ