ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲಕೇರಿಯಲ್ಲಿ ತಹಶೀಲ್ದಾರ್ ವಾಸ್ತವ್ಯ

ಧಾರವಾಡ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯದ ಭಾಗವಾಗಿ ಧಾರವಾಡ ತಾಲೂಕಿನ ತಹಶೀಲ್ದಾರ್ ಡಾ.ಸಂತೋಷ ಬಿರಾದರ ಅವರು ಕಲಕೇರಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧಪಟ್ಟ ಇಲಾಖೆಗೆ ಕೂಡಲೇ ಅವರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಕೆರೆ, ದೇವಸ್ಥಾನ, ರುದ್ರಭೂಮಿ, ರಸ್ತೆ, ಅತಿವೃಷ್ಟಿಯಲ್ಲಿ ಬಿದ್ದ ಮನೆ ದುರಸ್ಥಿ ಕಾರ್ಯ ವೀಕ್ಷಿಸಿದರು.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ತಹಶೀಲ್ದಾರ್ ಡಾ. ಸಂತೋಷ ಬಿರಾದಾರ ಅವರಿಂದ ವಿವಿಧ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿ ವಿತರಣೆ ಮಾಡಲಾಯಿತು. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಕಲಕೇರಿ ಗ್ರಾಮದ ನೀಲವ್ವ ಗಂಗಪ್ಪ ಕೋಟೂರ, ಅಂತ್ಯ ಸಂಸ್ಕಾರ ಸಹಾಯ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳಡಿಯಲ್ಲಿ ಲಾಳಗಟ್ಟಿ ಗ್ರಾಮದ ಸಾಕವ್ವ ರಾಜಪ್ಪ ರಾಟೊಳ್ಳಿ, ವಿಧವಾ ವೇತನ ಯೋಜನೆಯಡಿ ಮಹಾದೇವಿ ಮರೆವಾಡ, ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆಯಡಿಯಲ್ಲಿ ಲಾಳಗಟ್ಟಿ ಗ್ರಾಮದ ಶಾಂತವ್ವ ಲಾಳಗಟ್ಟಿ, ರಾಷ್ಟ್ರೀಯ ಕಟುಂಬ ಯೋಜನೆಯಡಿಯಲ್ಲಿ ಚನ್ನವ್ವ ನೀರಲಗಿ ಫಲಾನುಭವಿಗಳು ಮತ್ತು ತಿರಸ್ಕೃತಗೊಂಡ ಪಿಂಚಣಿಗಳನ್ನು ಪುನಃ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ಕಲಕೇರಿ ಗ್ರಾಮದ ಹನಮಂತಪ್ಪ ಬಂಡಿವಡ್ಡರ ಮತ್ತು ವಿಧವಾ ಯೋಜನೆಯಡಿ ದೆವಗಿರಿ ಗ್ರಾಮದ ರುಕ್ಮವ್ವ ದುರ್ಗಾಯಿ ಫಲಾನುಭವಿಗಳು ಇಂದು ಆದೇಶ ಪ್ರತಿಯನ್ನು ಸ್ವೀಕರಿಸಿದರು.

Edited By : Vijay Kumar
Kshetra Samachara

Kshetra Samachara

20/02/2021 10:57 pm

Cinque Terre

13.53 K

Cinque Terre

0

ಸಂಬಂಧಿತ ಸುದ್ದಿ