ಹುಬ್ಬಳ್ಳಿ- ಅವಳಿ ನಗರದ ಮಹಾನಗರ ಪಾಲಿಕೆ ರಾಜ್ಯದ 2ನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿ ಹೊಂದಿದೆ. ಆದರೆ ಪಾಲಿಕೆಯಲ್ಲಿ ಹಲವು ಹುದ್ದೆಗಳು ಬಹು ದಿನಗಳಿಂದ ಖಾಲಿಯಿದ್ದು, ಆಡಳಿತ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.
ಹು- ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಮಹಾನಗರ ಪಾಲಿಕೆಯಲ್ಲಿ ಶೇ. 50ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಗ್ರೂಪ್ 'ಎ'ಯಲ್ಲಿ ಶೇ. 40ರಷ್ಟು, ಗ್ರೂಪ್ 'ಬಿ'ಯಲ್ಲಿ ಶೇ. 45ರಷ್ಟು ಹಾಗೂ ಗ್ರೂಪ್ 'ಸಿ'ಯಲ್ಲಿ ಶೇ. 65ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಇವರಲ್ಲಿ ಅಧೀಕ್ಷಕರು, ಉಪ ಅಧೀಕ್ಷಕರು, ಪ್ರಥಮ ದರ್ಜೆ ಗುಮಾಸ್ತರು, ದ್ವಿತೀಯ ದರ್ಜೆ ಗುಮಾಸ್ತರು, ಹಿರಿಯ ಆರೋಗ್ಯ ನಿರೀಕ್ಷಕ, ಆರೋಗ್ಯ ಅಧೀಕ್ಷಕರು ಹಾಗೂ ವಾಚ್ಮನ್, ಪೌರ ಕಾರ್ಮಿಕರು ಸೇರಿದ್ದಾರೆ.
ಇದಲ್ಲದೆ ಪ್ರತಿ ವರ್ಷ ಸುಮಾರು 100ಕ್ಕೂ ಹೆಚ್ಚು ನೌಕರರು ಸೇವೆಯಿಂದ ನಿವೃತ್ತಿ ಹೊಂದುತ್ತಾರೆ. ಇವುಗಳಲ್ಲದೆ ಹಲವು ವರ್ಷಗಳಿಂದ ನಗರ ಯೋಜನೆ ಉಪ ನಿರ್ದೇಶಕರು, ಕಾನೂನು ಅಧಿಕಾರಿ, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕಿರಿಯ ಅಭಿಯಂತರರು, ಪರಿಸರ ಅಭಿಯಂತರ, ಸರ್ವೇ ಅಧೀಕ್ಷಕರು, ನಿರ್ಮಲೀಕರಣ ಹಿರಿಯ ನಿರೀಕ್ಷಕ, ಹಿರಿಯ ಔಷಧ ಮಿಶ್ರಕ, ಈಜು ಶಿಕ್ಷಕ, ಈಜು ತರಬೇತುದಾರ, ಎಕ್ಸ್-ರೇ ತಂತ್ರಜ್ಞ, ಕಾಮಗಾರಿ ನಿರೀಕ್ಷಕ, ವಾಹನ ಚಾಲಕರು, ಸಹಾಯಕ ವಿದ್ಯುತ್‌ಗಾರ, ಆಯಾ, ನಿರ್ಮಲೀಕರಣ ಜಮಾದಾರ, ಮಾರುಕಟ್ಟೆ ನಿರೀಕ್ಷಕರು, ವಾಸ್ತುಶಿಲ್ಪಿ, ಪ್ರಥಮ ದರ್ಜೆ ಗುಮಾಸ್ತ, ದ್ವಿತೀಯ ದರ್ಜೆ ಗುಮಾಸ್ತ, ಮೋಜಣಿದಾರ, ಟೈಪ್ರೈಟರ್ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ.
ಈಗಾಗಲೇ ಮೂರ್ನಾಲ್ಕು ಹುದ್ದೆಗಳನ್ನು ಒಬ್ಬೊಬ್ಬ ಅಧಿಕಾರಿಯೇ ನಿರ್ವಹಿಸುತ್ತಿದ್ದು, ಭವಿಷ್ಯದಲ್ಲಿ ಏಳೆಂಟು ಹುದ್ದೆಗಳನ್ನು ಒಬ್ಬ ಅಧಿಕಾರಿಯೇ ನಿರ್ವಹಿಸುವಂತಹ ದುಸ್ಥಿತಿಗೆ ಪಾಲಿಕೆ ಬಂದಿದೆ. ಆದ್ರೆ ಇತ್ತೀಚೆಗೆ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಸಲ್ಲಿಸಿದೆ. ಅಲ್ಲಿಯವರೆಗೂ ನಮಗೂ ಹೊರೆಯಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು...!
Kshetra Samachara
20/02/2021 08:46 pm