ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಂಜೀವಿನಿಗೂ 'ಆಧಾರ್' ಕಡ್ಡಾಯ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯದಲ್ಲಿರುವ ಸಂಜೀವಿನಿ ಪಾರ್ಕ್ ಎಂದರೆ ಅದು ಪ್ರೇಮಿಗಳ ಅಚ್ಚುಮೆಚ್ಚಿನ ತಾಣ. ಕಾಲೇಜು ಹಂತದಲ್ಲೇ ಪ್ರೇಮವೆಂಬ ಪಾಶಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸಂಜೀವಿನಿ ಪಾರ್ಕ್ ಗೆ ಬಂದು ಕಾಲ ಕಳೆಯುತ್ತಾರೆ. ಆದರೆ, ಇದೀಗ ಈ ಪಾರ್ಕ್ ಗೆ ಬರುವ ಪ್ರೇಮಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತರಬೇಕಾಗಿದೆ.

ಪಾರ್ಕ್ ನಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆ, ಕೂಗಾಟ, ಚೀರಾಟ ಕಡಿಮೆ ಮಾಡಲು ಕಾಲೇಜು ಐಡಿ, ಆಧಾರ ಕಾರ್ಡ್ ಸೇರಿದಂತೆ ಗುರುತಿನ ಚೀಟಿಯನ್ನು ಪ್ರೇಮಿಗಳಿಗೆ ಕಡ್ಡಾಯಗೊಳಿಸಲಾಗಿದೆ.

ಜನರಿಗೆ ಅರಣ್ಯ ಜಾಗೃತಿ ಮೂಡಿಸಲು, ಔಷಧೀಯ ಸಸ್ಯಗಳ ಬಗ್ಗೆ ಅರಿವು ಮೂಡಿಸಲು ಮನಸ್ಸು ಉಲ್ಲಾಸಿತಗೊಳಿಸಲು ಸತ್ತೂರಿನ 72 ಎಕರೆ ಜಾಗದಲ್ಲಿ ಸಂಜೀವಿನಿ ವನ ನಿರ್ಮಿಸಲಾಗಿದೆ. ಇದರಲ್ಲಿ 10 ಎಕರೆ ಉದ್ಯಾನವನವಾಗಿ ಮಾರ್ಪಡಿಸಲಾಗಿದೆ. ಪಾರ್ಕನಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ವಾಕಿಂಗ್ ಪಾಥ್, ವಾಚ್ ಟವರ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಪಾರ್ಕಗೆ ಒಳಹೋಗುವಾಗ ಪ್ರವೇಶ ರಶೀದಿ ಪಡೆಯುವಾಗ ಆಧಾರ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಅಲ್ಲಿಂದ ಮರಳಿ ವಾಪಸ್ಸು ಹೋಗುವಾಗ ಪಡೆದುಕೊಂಡು ಹೋಗಬಹುದು. ಇದರಿಂದ ಅಲ್ಲಿ ಕೂಗಾಟ ಚೀರಾಟ ಸೇರಿದಂತೆ ಅಸಭ್ಯ ವರ್ತನೆಗಳಿಗೆ ಕಡಿವಾಣ ಹಾಕಲಾಗಿದೆ.

ಈ ಉದ್ಯಾನವನ ಹೊರವಲಯದಲ್ಲಿದೆ. ಸುತ್ತಮುತ್ತಲು ದಟ್ಟವಾದ ಮರಗಳಿಂದ ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಪಾರ್ಕ್ ಗೆ ಆಗಮಿಸಿ ಅಸಭ್ಯ ವರ್ತನೆ ತೋರುವುದರಿಂದ ಅನ್ಯ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸಿಬ್ಬಂದಿಗೆ ಕಷ್ಟವಾಗುತ್ತಿತ್ತು.

ಪಾರ್ಕಗೆ ಆಗಮಿಸುವವರ ಪೈಕಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚೀರಾಟ ನಡೆಸಿ ವಾತಾವರಣ ಹಾಳು ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಎಚ್ಚೆತ್ತುಕೊಂಡ ಇಲಾಖೆ ಆಧಾರ ಕಡ್ಡಾಯಗೊಳಿಸಿದೆ.

Edited By : Manjunath H D
Kshetra Samachara

Kshetra Samachara

16/02/2021 01:31 pm

Cinque Terre

65.76 K

Cinque Terre

28

ಸಂಬಂಧಿತ ಸುದ್ದಿ