ಧಾರವಾಡ: ಮೊನ್ನೆಯಷ್ಟೇ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯುವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರನ್ನಾಗಿ ಕೆಎಎಸ್ ಅಧಿಕಾರಿ ರಮೇಶ ದೇಸಾಯಿ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿತ್ತು. ಆದರೆ ಮೂರೇ ದಿನದಲ್ಲಿ ದೇಸಾಯಿ ಅವರನ್ನು ಸರ್ಕಾರ ಆ ಸ್ಥಾನದಿಂದ ಕೆಳಗಿಳಿಸಿದೆ.
ಹೌದು. ಶಿಕ್ಷಣ ಇಲಾಖೆಯ ವಾಯುವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾಗಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಸ್ಥಾನಕ್ಕೆ ದೇಸಾಯಿ ಅವರನ್ನು ಮೊನ್ನೆಯಷ್ಟೇ ಸರ್ಕಾರ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಆದೇಶದ ಪ್ರಕಾರ ಹಿರೇಮಠ ಅವರು ದೇಸಾಯಿ ಅವರಿಗೆ ಅಧಿಕಾರ ಕೂಡ ಹಸ್ತಾಂತರಿಸಿ ಹೋಗಿದ್ದರು. ಆದರೆ ಮೂರೇ ದಿನದಲ್ಲಿ ಆ ಸ್ಥಾನಕ್ಕೆ ಮತ್ತೊಂದು ಅವಧಿಗೆ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನೇ ನೇಮಿಸಿದೆ. ಇಂದು ಮತ್ತೇ ಹಿರೇಮಠ ಅವರು ಎರಡನೇ ಅವಧಿಗೆ ಶಿಕ್ಷಣ ಇಲಾಖೆಯ ವಾಯುವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಹಿರೇಮಠ ಅವರು, 2018ರ ಮಾರ್ಚ 22ರಂದು ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಕಳೆದ 3 ವರ್ಷಗಳಿಂದ ಬೆಳಗಾವಿ ವಿಭಾಗದ 9 ಜಿಲ್ಲೆಗಳ ಆಡಳಿತ ನಿರ್ವಹಿಸಿದ್ದರು. ಇಂದು ಎರಡನೇ ಅವಧಿಗೆ ಹಿರೇಮಠ ಅವರನ್ನೇ ಸರ್ಕಾರ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿ ಅವರ ವರ್ಗಾವಣೆಯನ್ನು ರದ್ದುಗೊಳಿಸಿದ ನಂತರ ಅವರು ಅಧಿಕಾರ ವಹಿಸಿಕೊಂಡು ಶಿಕ್ಷಣ ಸಚಿವ ಸುರೇಶಕುಮಾರ ಅವರ ಜೊತೆ ಖಾನಾಪುರ ಪ್ರವಾಸಕ್ಕೆ ತೆರಳಿದ್ದರು.
Kshetra Samachara
08/02/2021 10:47 pm