ಹುಬ್ಬಳ್ಳಿ: 20 ವರ್ಷ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವಂತಹ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಹತ್ತು ಹೈದಿನೈದು ವರ್ಷಗಳ ಕಾಲ ಹತ್ತಾರು ಲಕ್ಷ ಕೀಲೋ ಮೀಟರ್ ಕ್ರಮಿಸೋರು ವಾಹನಗಳು ಮಾತ್ರ ಇನ್ನೂ ರಸ್ತೆಗಿಳಿಯುತ್ತಿವೆ. ಹೌದು, ವಾಯುವ್ಯ ಸಾರಿಗೆ ಸಂಸ್ಥೆಯೊಂದರಲ್ಲಿ ಸುಮಾರು ಎರಡೂವರೆ ಸಾವಿರ ಬಸ್ ಗಳನ್ನು ಗುಜರಿ ಹಾಕಬೇಕಾಗಿದ್ದರೂ, ಅದೇ ಬಸ್ ಗಳು ಪ್ರಯಾಣಿಕರ ಪ್ರಯಾಣಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಓಡಾಡೋ ಪ್ರಯಾಣಿಕರು ಕೈಯಲ್ಲೆ ಜೀವ ಹಿಡಿದುಕೊಂಡು ಪ್ರಯಾಣ ಮಾಡಬೇಕಿದೆ ನೋಡಿ..
ಹತ್ತಾರು ವರ್ಷ ಹಳೆಯದಾದ ಬಸ್ ಗಳು.. ಕಂಡ ಕಂಡಲ್ಲಿ ಕೆಟ್ಟು ನಿಲ್ಲೋ ಬಸ್ ಗಳು.. ಹೌದು. ಇತಂಹ ಸಾವಿರಾರು ಸಾರಿಗೆ ಬಸ್ ಗಳು ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿವೆ ನೋಡಿ. ಪ್ರಯಾಣಿಕರು ಪ್ರಯಾಣ ಮಾಡಲು ಯೋಗ್ಯವಲ್ಲದ ಬಸ್ ಗಳು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರೊಂದಿಗೆ ಪ್ರಯಾಣ ಮಾಡುತ್ತಿವೆ. ಸಾರಿಗೆ ಸಂಸ್ಥೆಯ ಡ್ರೈವರ್ ಗಳು ಗುಜರಿಗೆ ಹಾಕಬೇಕಾದ ಬಸ್ ಗಳನ್ನೆ ಮತ್ತೆ ಮತ್ತೆ ಬಳಸಿ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಡವಾಡುತ್ತಿದ್ದಾರೆ.
ವಾಯುವ್ಯ ಸಾರಿಗೆ ಸಂಸ್ಥೆಯ ೫ ಸಾವಿರ ಬಸ್ ಗಳ ಫೈಕಿ ಎರಡೂವರೆ ಸಾವಿರ ಬಸ್ ಗಳ ಅವಧಿ ಮುಗಿದಿದೆ. ಹತ್ತಕ್ಕೂ ಹೆಚ್ಚು ಲಕ್ಷ ಕೀಲೋ ಮೀಟರ್ ದೂರ ಕ್ರಮಿಸಿರುವ ಬಸ್ ಗಳು ವಾಯುವ್ಯ ಸಾರಿಗೆ ನಿಗಮದಲ್ಲಿ ಸಾವಿರಾರು ಇವೆ. ಎಳೂವರೆ ಲಕ್ಷ ಕೀಲೋ ಓಡಿದ ಬಸ್ ಗಳನ್ನ ಗುಜರಿಗೆ ಹಾಕಬೇಕಾಗಿದ್ರು ಅದೇ ಬಸ್ ಗಳಲ್ಲೆ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಗುಜರಿ ಹಾಕಬೇಕಾಗಿರುವ ಬಸ್ ಗಳನ್ನ ಮತ್ಯಾಕೆ ರೋಡಿಗೆ ಇಳಿಸುತ್ತಿದ್ರೀ ಅಂದ್ರೆ ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಎನೂ ಹೇಳ್ತಾರೆ ನೋಡಿ..
ಡಕೋಟಾ ಎಕ್ಸಪ್ರೇಸ್ ಅನ್ನುವಂತಹ ಬಸ್ ಗಳನ್ನ ಇಟ್ಟುಕೊಂಡು ವಾಯುವ್ಯ ಸಾರಿಗೆ ಸಂಸ್ಥೆ ಪ್ರಯಾಣಕರಿಗೆ ಬಸ್ ಸೇವೆ ಒದಗಿಸುತ್ತಿದೆ. ಅಲ್ಲದೇ ಹೊಸ ಬಸ್ ಗಳನ್ನ ಒದಗಿಸಿ ಅಂತಾ ಸರ್ಕಾರಕ್ಕೆ ಪತ್ರ ಬರೆದ್ರು ಸಾರಿಗೆ ಸಚಿವರು ಮಾತ್ರ ವಾಯುವ್ಯ ಸಾರಿಗೆ ಸಂಸ್ಥೆಗೆ ಹೊಸ ಬಸ್ ಗಳನ್ನ ನೀಡ್ತಾ ಇಲ್ಲ. ಹೀಗಾಗಿ ಒಂದೆಡೆ ನಷ್ಟ ಇನ್ನೊಂದೆಡೆ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಡವಾಡುತ್ತಲೇ ಸೇವೆ ನೀಡಬೇಕಾದ ಪರಿಸ್ಥಿತಿ ವಾಯುವ್ಯ ಸಾರಿಗೆ ಸಂಸ್ಥೆ ಬಂದೊದಗಿದೆ. ಇನಾದ್ರು ಸಾರಿಗೆ ಸಚಿವರು ವಾಯುವ್ಯ ಸಾರಿಗೆ ಸಂಸ್ಥೆಯ ಡಕೋಟಾ ಬಸ್ ಗಳನ್ನ ಗುಜರಿ ಹಾಕಿ ಹೊಸ ಬಸ್ ಗಳನ್ನ ನಿಗಮಕ್ಕೆ ನೀಡಲಿ ಎನ್ನುವುದು ಉತ್ತರ ಕರ್ನಾಟಕದ ಜನರ ಒತ್ತಾಯವಾಗಿದೆ.
Kshetra Samachara
06/02/2021 11:27 am