ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಾಕ್ ಡೌನ್ ಮಧ್ಯೆದಲ್ಲಿಯೂ ಮಹಾನಗರ ಪಾಲಿಕೆಗೆ ಹರಿದ ಬಂದ ಆಸ್ತಿ ತೆರಿಗೆ....

ಹುಬ್ಬಳ್ಳಿ: ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ವಾಣಿಜ್ಯೋದ್ಯಮಿಗಳು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರು ಕೊಂಚ ಮಟ್ಟಿಗೆ ನೆಮ್ಮದಿಯ‌ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗಷ್ಟೇ ಲಾಕ್‌ಡೌನ್‌ನಿಂದ ನಿಟ್ಟುಸಿರು ಬಿಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನರ ಪಾಲಿಕೆಗೆ ತೆರಿಗೆ ಕಟ್ಟುವುದರಲ್ಲಿ ಹಿಂದೆ ಬಿದ್ದಿಲ್ಲ.

ಲಾಕ್ ಡೌನ್ ಮಧ್ಯೆದಲ್ಲಿಯೂ ಕೂಡ ಆಸ್ತಿ ತೆರಿಗೆ ಕಟ್ಟುವ ಮೂಲಕ ಮಹಾನಗರ ಪಾಲಿಕೆ ಆದಾಯವನ್ನು ಹೆಚ್ಚಿಸಿದ್ದಾರೆ. 2018-19ನೆಯ ಸಾಲಿನಲ್ಲಿ 72 ಕೋಟಿ ರೂಪಾಯಿ ಸಂಗ್ರಹವಾಗಬೇಕಿತ್ತು. ಮಾರ್ಚ್ ಮೊದಲ ವಾರದವರೆಗೆ 55 ಕೋಟಿ‌‌ ರೂಪಾಯಿ ತೆರಿಗೆ ಹಣ ಸಂಗ್ರಹವಾಗಿದೆ. ಕೊರೋನಾ ಹಾವಳಿಗೂ ಮೊದಲು ಜನರು ಸಹಜವಾಗಿ ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಆದರೆ ಈಗ ಸಂಕೀರ್ಣ ಸ್ಥಿತಿಯ ನಡುವೆಯೂ ತೆರಿಗೆ ಕಟ್ಟಿದ್ದಾರೆ. 2020-21 ರಲ್ಲಿ 92 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ಈಗಾಗಲೇ 59 ಕೋಟಿ ತೆರಿಗೆ ಸಂಗ್ರಹವಾಗಿದೆ. ಅದು ಕೂಡ ಲಾಕ್ ಡೌನ್ ನಡುವೆಯೂ ಸಾರ್ವಜನಿಕರು ತೆರಿಗೆ ಕಟ್ಟಿದ್ದಾರೆ. ಇನ್ನೂ ಬಾಕಿ ವಾಣಿಜ್ಯ ಮಳಿಗೆಗಳಿಂದ ತೆರಿಗೆ ಬರಬೇಕಿದೆ. ರೋಡ್ ಕಟಿಂಗ್ ನಿಂದ ಸುಮಾರು 10 ಕೋಟಿ ಹಣ ಸಂಗ್ರಹದ ನಿರೀಕ್ಷೆ ಇದೆ. ಆದ್ರೆ ಈಗಾಗಲೇ 6 ಕೋಟಿ ಹಣ ಸಂಗ್ರಹವಾಗಿದೆ. ಉಳಿದ 4 ಕೋಟಿ ಬರಬೇಕಿದೆ‌. ಇನ್ನು ಟ್ರೆಡ್ ಲೈಸನ್ಸ್ ನನ್ನು ಶೇ.70 ರಷ್ಟು ವಸೂಲಿ ಮಾಡಲಾಗಿದೆ.

ಕಳೆದ ವರ್ಷ ಡಿಸೆಂಬರ್ ಅಂತ್ಕಕ್ಕೆ ಕೇವಲ 58 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿತ್ತು‌ ಆದ್ರೆ ಈ ಬಾರಿ 59 ಕೋಟಿ ಸಂಗ್ರಹವಾಗಿದ್ದು, ಮಾರ್ಚ್ ಅಂತ್ಯದೊಳಗ ಗುರಿ ಮಟ್ಟುವ ವಿಶ್ವಾಸವನ್ನು ಮಹಾನಗರ ಪಾಲಿಕೆ ಹೊಂದಿದೆ.

ಪಾಲಿಕೆ ಕಳೆದ ಹಲವು ವರ್ಷಗಳಿಂದ ಅನುಸರಿಸುತ್ತಿರುವ ನಿಯಮದಂತೆ ಜುಲೈ 31ರೊಳಗೆ ತಮ್ಮ ವಾರ್ಷಿಕ ತೆರಿಗೆಯನ್ನು ಪಾವತಿಸುವ ಆಸ್ತಿ ಮಾಲೀಕರಿಗೆ ಪಾಲಿಕೆ ಶೇ.5 ರಿಯಾಯಿತಿ ನೀಡಿದೆ. ಕಳೆದ ಏಪ್ರಿಲ್‌ 1ರಿಂದ 30ರವರೆಗೆ ಶೇ.5ರಷ್ಟು ರಿಯಾಯಿತಿ ನೀಡಲಾಗಿತ್ತು. ಆದರೆ ಕೋವಿಡ್‌-19 ಲಾಕ್‌ಡೌನ್‌ ಮತ್ತು ಸಂಬಂಧಿತ ನಿಯಮಗಳ ಕಾರಣದಿಂದಾಗಿ, ಎಂಸಿಸಿ ಈ ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿತ್ತು. ಇದಲ್ಲದೆ ಈ ಸಾಲಿನಿಂದ ಸಾರ್ವಜನಿಕರು ಆನ್‌ಲೈನ್‌ ಮುಖಾಂತರವೂ ತೆರಿಗೆ ಪಾವತಿಸಲು ಅವಕಾಶ ನೀಡಲಾಯಿತು. ಇದರಿಂದಾಗಿ ಜನರು ಆಸ್ತಿ, ನೀರಿನ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸಲು ಸಾಧ್ಯವಾಗಿದೆ.

ಆದ್ರೆ ಲಾಕ್ ಡೌನ್ ಸಂದರ್ಬದಲ್ಲಿ ತೆರಿಗೆ ವಿನಾಯಿತಿ ‌ನೀಡಲಾಗಿದೆ‌. ಇದರಿಂದ ಮಹಾನಗರ ಪಾಲಿಕೆಗೆ ಕೊಂಚ ಹೊರೆಯಾದ್ರು ಕೂಡ ಮಹಾಗರ ಪಾಲಿಕೆ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.

Edited By : Manjunath H D
Kshetra Samachara

Kshetra Samachara

01/02/2021 01:47 pm

Cinque Terre

37.01 K

Cinque Terre

1

ಸಂಬಂಧಿತ ಸುದ್ದಿ