ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಖಾಸಗಿ ವಾಹಿನಿ ಮೇಲೆ ದಾಳಿ ಖಂಡಿಸಿ ತಹಶೀಲ್ದಾರ್‌ಗೆ ಮನವಿ

ನವಲಗುಂದ: ಬೆಂಗಳೂರಿನ ಖಾಸಗಿ ವಾಹಿನಿಯೊಂದರ ಮೇಲೆ ಪುಂಡರು ದಾಳಿ ನಡೆಸಿದ್ದು ಮತ್ತು ಪ್ರಧಾನ ಸಂಪಾದಕರಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನವಲಗುಂದ ಭೀಮ್ ಆರ್ಮಿ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ರಮೇಶ್ ಮಲ್ಲದಾಸರ, ಡಿ ಎಸ್ ಎಸ್ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಪುರಸಭೆ ಸದ್ಯಸ ರವಿ ಬೆಂಡಿಗೇರಿ, ಡಿ ಎಸ್ ಎಸ್ ನಗರ ಘಟಕ ಸಂಚಾಲಕ ನಿಂಗಪ್ಪ ಜಾಡರ, ಸಂಘಟನಾ ಸಂಚಾಲಕ ಹೂವಪ್ಪ ದೊಡಮನಿ ಸೇರಿದಂತೆ ಹುಚ್ಚಪ್ಪ ದೊಡಮನಿ, ಮೈಲಾರಪ್ಪ ವೈದ್ಯ, ಶಿವರಾಜ ಕಾತರಕಿ, ಸುನೀಲ್ ನರಸಪ್ಪನವರ, ಕೃಷ್ಣ ದೊಡಮನಿ, ಬಸವರಾಜ ವೈದ್ಯ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

30/01/2021 01:42 pm

Cinque Terre

10.72 K

Cinque Terre

0

ಸಂಬಂಧಿತ ಸುದ್ದಿ