ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೊನಾ ಆತಂಕದಲ್ಲಿಯೇ ಮಹಾನಗರ ಪಾಲಿಕೆ ಪವಾಡ:ಆಸ್ತಿಕರ ಸಂಗ್ರಹದಲ್ಲಿ ದಾಖಲೆ

ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ಎರಡನೇ ದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆ ಕರೊನಾ ಸಮಯದಲ್ಲೂ ದೊಡ್ಡ ಸಾಧನೆ ಮಾಡಿದೆ. ಪಾಲಿಕೆ ಮಾಡಿದ ಸಾಧನೆಯಿಂದ ನಗರದ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪವಾಡ.. ಕಲೆಕ್ಷನ್‌ನಲ್ಲಿ 7.48 ಕೋಟಿ ರೂಪಾಯಿ ಹೆಚ್ಚಳ.. ಕೋವಿಡ್ ಸಂದರ್ಭದಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2020-21ನೇ ಸಾಲಿನಲ್ಲಿ ಆಸ್ತಿಕರ ಸಂಗ್ರಹದಲ್ಲಿ ಏರಿಕೆ ದಾಖಲಿಸಿದೆ.

2019-20ನೇ ಸಾಲಿನ ಡಿಸೆಂಬರ್ (2019) ಅಂತ್ಯಕ್ಕೆ ಅಸ್ತಿ ತೆರಿಗೆ ಮೂಲಕ 49.5 ಕೋಟಿ ರೂ. ಆದಾಯ ಸಂಗ್ರಹಿಸಲಾಗಿತ್ತು, 2020-25ನೇ ಸಾಲಿನ ಡಿಸೆಂಬರ್ (2020) ಅಂತ್ಯಕ್ಕೆ 57.03 ರೂ, ಸಂಗ್ರಹಿಸಲಾಗಿದೆ.

ಒಟ್ಟಾರೆ 7.48 ಕೋಟಿ ರೂ. ಹೆಚ್ಚಳವಾಗಿದೆ. ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯಲ್ಲಿ ವಾಸದ ಕಟ್ಟಡಗಳಿಗೆ ಶೇ. 20ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ 30ರಷ್ಟು, ಸಾಲಿನಲ್ಲಿ 78.89 ಕೋಟಿ ಗುರಿ ಇತ್ತು.

ವಾಸದ ಕಟ್ಟಡ, ವಾಣಿಜ್ಯ, ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳಿಗೆ ಶೇ 25ರಷ್ಟು ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳು ಹಾಗೂ ಖುಲ್ಲಾ ಜಾಗ ಹಾಗೂ ಖುಲ್ಲಾ ಜಾಗಗಳಿಗೆ ಶೇ. 30ರಷ್ಟು ಏರಿಕೆ ಮಾಡಿ ಮೇ ತಿಂಗಳಲ್ಲಿ ಪಾಲಿಕೆ ಅಧಿಕಾರಿಗಳು ಆದೇಶ ಹೊರಡಿಸಿದ್ದರು.

ಈ ಏರಿಕೆಯಿಂದ ಪಾಲಿಕೆ ಪ್ರಸಕ್ತ ಸಾಲಿನ ಮಾರ್ಚ್ (2021) ಅಂತ್ಯದವರೆಗೆ ಆಸ್ತಿ ತೆರಿಗೆಯಿಂದ 93 ಕೋಟಿ ರೂಪಾಯಿ ಸಂಗ್ರಹ ಗುರಿ ಇಟ್ಟುಕೊಂಡಿದೆ. ಈಗಾಗಲೇ ಅಂದು‌ ಕೊಂಡಂತೆ ಪಾಲಿಕೆಗೆ ಹೆಚ್ಚಿನ ತೆರಿಗೆ ಹರಿದು ಬಂದಿದೆ.

ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಲು ತೆರಿಗೆ ದರ ಏರಿಕೆ ಮಾಡಿರುವುದೊಂದೇ ಕಾರಣವಲ್ಲ. ಹಿಂಬಾಕಿ 14 ಕೋಟಿ ರೂ. ಸೇರಿ 2020-21ನೇ ಸಾಲಿನ ಆಸ್ತಿ ತೆರಿಗೆ ಗುರಿ 93 ಕೋ ಆಗಿರುತ್ತದೆ.

ಹೊರಗೆ ಉಳಿದಿದ್ದ ಬಹಳಷ್ಟು ಆಸ್ತಿಗಳನ್ನು ತೆರಿಗೆ ಜಾಲಕ್ಕೆ ತರಲಾಗಿದೆ. ಪಾವತಿಸಿದರೆ ಶೇ. 5 ರಿಯಾಯಿತಿ ನೀಡಲಾಗುತ್ತಿತ್ತು.

ಕಳೆದ ವರ್ಷ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಶೇ. 45-50ರಷ್ಟು ಆಸ್ತಿ ಮಾಲೀಕರು ರಿಯಾಯಿತಿ ಅವಧಿಯಲ್ಲಿಯೇ ತೆರಿಗೆ ಪಾವತಿಸಿದ್ದಾರೆ. ಇದರಿಂದ ಪಾಲಿಕೆ ಬೊಕ್ಕಸ ಭರ್ತಿಯಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಹುದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. ಇದೇ ತೆರಿಗೆಯನ್ನ ಈಗ ಅವಳಿ ನಗರದ ಜನ ತುಂಬಿ ಪಾಲಿಕೆಯ ಖಜಾನೆ ತುಂಬಿಸಿದ್ದಾರೆ.

ಅಧಿಕಾರಿಗಳ ಜೊತೆ ಸಾರ್ವಜನಿಕರು ಕೈ‌ ಜೊಡಿಸಿದ್ದು ಇಷ್ಟೆಲ್ಲಾ ಮಾಡಲು ಅನುಕೂಲವಾಗಿದೆ. ಇದೇ ರೀತಿ ಎಲ್ಲರೂ ತೆರಿಗೆ ತುಂಬಿ ಪಾಲಿಕೆ ಅಭಿವೃದ್ಧಿಯಾಗಲು ಕೈ ಜೋಡಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

05/01/2021 01:46 pm

Cinque Terre

35.95 K

Cinque Terre

4

ಸಂಬಂಧಿತ ಸುದ್ದಿ