ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾ.ಪಂ ಮತ ಎಣಿಕೆ ಆರಂಭ ಅಭ್ಯರ್ಥಿಗಳ ಎದೆ ಢವ ಢವ

ಕುಂದಗೋಳ : ತಾಲೂಕಿನ 23 ಗ್ರಾಮ ಪಂಚಾಯಿತಿಗಳ 1081 ಅಭ್ಯರ್ಥಿಗಳ ಚುನಾವಣಾ ಫಲಿತಾಂಶದ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದಲೇ ಪಟ್ಟಣದ ಹರಭಟ್ಟ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಗಿದೆ.

ಆಯಾ ಪಂಚಾಯಿತಿ ಕೊಠಡಿ ಸಂಖ್ಯೆ ಅನುಸಾರ ಮತ ಎಣಿಕೆ ಕಾರ್ಯ ಮಾಡುತ್ತಿದ್ದು ಹರಭಟ್ಟ ಕಾಲೇಜು ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಕಳಸ, ಕಮಡೊಳ್ಳಿ, ಗೌಡಗೇರಿ, ರಟಗೇರಿ, ಕೊಡ್ಲಿವಾಡ, ಹಿರೇನರ್ತಿ, ಹರ್ಲಾಪುರ, ರಾಮನಕೊಪ್ಪ, ಮರೇಬೂದಿಹಾಳ, ಜಿಗಳೂರು, ಬೆಳ್ಳಿಗಟ್ಟಿ, ಯಲಿವಾಳ, ಭಾಗದ ಮೊದಲ ಮತ ಎಣಿಕೆ ಕಾರ್ಯ 3 ಗಂಟೆ ತಲುಪಿದ್ದು ಇನ್ನೊಂದು ಘಂಟೆಯಲ್ಲಿ ಫಲಿತಾಂಶ ಹೊರಬೀಳಲಿದೆ.

ಮತ ಎಣಿಕೆಗೆ ಆಗಮಿಸುವ ಅಭ್ಯರ್ಥಿಗಳು ಹಾಗೂ ಪೊಲೀಂಗ್ ಎಜೇಂಟರ್'ಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳ ಬಿಡಲಾಗುತ್ತಿದ್ದು, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸದ್ಯ ಮತ ಎಣಿಕೆ ನಡೆದ ಅಭ್ಯರ್ಥಿಗಳ ಬೆಂಬಲಿಗರು ಹರಭಟ್ಟ ಕಾಲೇಜು ಆವರಣದ ಹೊರಗೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಪಕ್ಕದ ಕಂಪೌಂಡ್ ಗೋಡೆಗೆ ನೆರಳಲ್ಲಿ ಆಶ್ರಯ ಪಡೆಯುತ್ತಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ಕೇಂದ್ರಿಕೃತವಾಗಿದೆ.

Edited By : Manjunath H D
Kshetra Samachara

Kshetra Samachara

30/12/2020 11:51 am

Cinque Terre

29.61 K

Cinque Terre

2

ಸಂಬಂಧಿತ ಸುದ್ದಿ