ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಲ್ಯಾಮಿಂಗ್ಟನ್ ಸ್ಕೂಲ್ ನಲ್ಲಿ ಆರಂಭವಾದ ಮತ ಎಣಿಕೆ..

ಹುಬ್ಬಳ್ಳಿ- ಗ್ರಾಮ ಪಂಚಾಯತಿ ಮತ ಎಣಿಕೆ ಆರಂಭವಾಗಿದೆ. ಹುಬ್ಬಳ್ಳಿ ತಾಲೂಕಿನ ಸ್ಟ್ರಾಂಗ್ ರೂಮ್ ನ್ನು ಅಧಿಕಾರಿಗಳು ಓಪನ್ ಮಾಡಿದ್ದಾರೆ.

ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿರುವ ಸ್ಟ್ರಾಂಗ್ ರೂಮ್ ನ್ನು ತಹಶೀಲ್ದಾರ ಪ್ರಕಾಶ ನಾಶಿ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಓಪನ್ ಮಾಡಿ ಮತ ಎಣಿಕೆ ಕೇಂದ್ರಗಳಿಗೆ ಬಾಕ್ಸ್ ಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿ ಹಂತ ಹಂತವಾಗಿ ಗ್ರಾಮ ಪಂಚಾಯತಿ ವಾರ್ಡ್ ವಾರು ಮತ ಎಣಿಕೆ ನಡೆಯಲಿದೆ.

ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿಗಳಿಗೆ 349 ಗಳಲ್ಲಿ 24 ಜನರು ಅವಿರೋಧವಾಗಿ ಆಯ್ಕೆಯಾದ್ರೆ ಇನ್ನುಳಿದ 373 ಸ್ಥಾನಗಳಿಗೆ ಸ್ಪರ್ಧಿಸಿದ್ದ 1036 ಜನರ ಭವಿಷ್ಯ ನಿರ್ಧಾರವಾಗಲಿದೆ. ಇದೇ ರೀತಿಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮತ ಎಣಿಕೆ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

30/12/2020 09:01 am

Cinque Terre

50 K

Cinque Terre

7

ಸಂಬಂಧಿತ ಸುದ್ದಿ