ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಂಗ್ಲ ನಾಮಫಲಕ ಹೊಂದಿದ್ದ ಅಂಗಡಿಗಳ ಬೋರ್ಡ್ ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ, ಅಂಗಡಿ ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕ ಹಾಕದೇ ಇರುವ ಅಂಗಡಿ ಮೇಲೆ ದಾಳಿ ನಡೆಸಿ, ನಾಮಫಲಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.

ನಗರದ ಗೋಕುಲ್ ರಸ್ತೆ ಕೊಪ್ಪಿಕೊರ ರಸ್ತೆ ಸೇರಿದಂತೆ, ಕನ್ನಡ ನಾಮಫಲಕ ಹಾಕುವಂತೆ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ್ ದಂಡೆಪ್ಪನ್ನವರ ನೇತೃತ್ವದಲ್ಲಿ ನೋಟಿಸ್ ಜಾರಿ ಮಾಡಿತ್ತು.

ಇಷ್ಟಾದರೂ ಸಹ ಕನ್ನಡ ನಾಮಫಲಕಕ್ಕೆ ಒತ್ತು ನೀಡದೆ, ಬೇರೆಬೇರೆ ಭಾಷೆಯಲ್ಲಿ ನಾಮಫಲಕ ಹಾಕಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ನಾಮಫಲಕ ತೆರವುಗೊಳಿಸಿ ಶೇ.60 ಕನ್ನಡಕ್ಕೆ ಆದ್ಯತೆ ನೀಡಬೇಕು.

ಸರಕಾರದ ಆದೇಶ ಪಾಲನೆ ಮಾಡದ ಅಂಗಡಿಗಳ ನಾಮಫಲ ತೆರವುಗೊಳಿಸುವ ಕಾರ್ಯಚರಣೆ ಮಾಡಿರುವುದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

29/12/2020 01:46 pm

Cinque Terre

47.12 K

Cinque Terre

27

ಸಂಬಂಧಿತ ಸುದ್ದಿ