ಧಾರವಾಡ: ಧಾರವಾಡ ಜಿಲ್ಲೆಯ ಸಾರ್ವಜನಿಕರಿಗೆ ಸಕಾಲ ಯೋಜನೆಯಡಿ ಒಳಗೊಂಡಿರುವ ಪೊಲೀಸ್ ಇಲಾಖೆಯಿಂದ ಪೂರೈಸುವ ಪರೀಶಿಲನಾ ಪ್ರಮಾಣ ಪತ್ರಗಳಿಗೆ ಪಿವಿಸಿ (ಪೊಲೀಸ್ ವೇರಿಪಿಕೇಶನ್ ಸರ್ಟಿಫಿಕೆಟ್)ಗಾಗಿ ಇನ್ನು ಮುಂದೆ ಪೊಲೀಸ್ ಅಧೀಕ್ಷಕರ ಕಚೇರಿಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸುವ ಬದಲಾಗಿ ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ ಮೂಲಕ ಆನ್‍ಲೈನದಲ್ಲಿ ಅರ್ಜಿ ಸಲ್ಲಿಸಿ ತಮಗೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ಅನಗತ್ಯವಾಗಿ ಕಚೇರಿಗೆ ಅಲಿಯದೇ ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ https://sevasindhu.karnataka.gov.in ಮೂಲಕ ಆನ್‍ಲೈನ್ ನಲ್ಲಿ ಸೇವೆಗಳಿಗೆ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಆನ್‍ಲೈನದಲ್ಲಿಯೇ ಪಡೆಯಬಹುದಾಗಿದೆ.
ಆನ್‍ಲೈನದಲ್ಲಿ ಸಲ್ಲಿಸಿರುವ ಅರ್ಜಿ ಹಂತ ಮತ್ತು ವಿತರಣೆ ಕುರಿತು ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾಣಿಸಲಾಗುತ್ತದೆ. ಸಂಸ್ಥೆಗಳು, ಕಂಪೆ ನಿಗಳಿಗೆ ಪೊಲೀಸ್ ಪರಿಶೀಲನೆ ಪ್ರಮಾಣ ಪತ್ರ, ಮದುವೆ ಸಂಬಂಧ ಪೂರ್ವಗತಿ ಪರಿಶೀಲನೆ, ನಡತೆ ಪರಿಶೀಲನೆ ಪ್ರಮಾಣ ಪತ್ರ, ಕೂಲಿ, ಲೋಡರ್, ಕ್ಲಾಸ್ 4, ಭದ್ರತಾ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿ ಮೇಲ್ವಿಚಾರಕರಿಗೆ (ವೈಯಕ್ತಿಕ ಅರ್ಜಿದಾರರು ಮಾತ್ರ) ಬೇಕಾದ ಪರೀಶಿಲನಾ ಪ್ರಮಾಣ ಪತ್ರಗಳಿಗೆ, ಕೇಂದ್ರಿಯ, ರಾಜ್ಯ ಸರ್ಕಾರಿ ನೌಕರರಿಗೆ, ದೇಶಿಯ ಸೇವಕರು, ಮನೆಕೆಲಸದವರು ಮತ್ತು ವಿದೇಶಕ್ಕೆ ಪ್ರಯಾಣಿಸಲು ಅಗತ್ಯ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮೂಲಕ ನೀಡಲಾಗುವುದು.
ಸಕಾಲ ಯೋಜನೆಯಡಿ ಒಳಗೊಂಡಿರುವ ಪೊಲೀಸ್ ಇಲಾಖೆಯ ಸೇವೆಗಳನ್ನು ಸೇವಾ ಸಿಂಧು ಅಂತರ ಜಾಲ ವೆಬ್ ಸೈಟ್ ಮೂಲಕ ಆನ್‍ಲೈನದಲ್ಲಿ ಅರ್ಜಿ ಸಲ್ಲಿಸಿ ತಮಗೆ ಅಗತ್ಯ ವಿರುವ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳವ ಮೂಲಕ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಸ್ಪಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ.
Kshetra Samachara
26/12/2020 03:09 pm