ಕುಂದಗೋಳ: ಕಳೆದ ಭಾನುವಾರ ಮಧ್ಯಾಹ್ನ ತೋಳಗಳ ದಾಳಿಯಿಂದ ಮೇಕೆ ಕುರಿ ಮರಿಗಳು ಸಾವನ್ನಪ್ಪಿದ ಘಟನೆ ಕುಂದಗೋಳದ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಾನಂದ ಭಾಗಣ್ಣನವರ ಎಂಬುವವರ ಕುರಿ ದೊಡ್ಡಿ ಮೇಲೆ ತೋಳಗಳು ದಾಳಿ ನಡೆಸಿ 15 ಕ್ಕೂ ಹೆಚ್ಚು ಮೇಕೆ ಕುರಿ ಮರಿಗಳನ್ನು ಬಲಿ ಪಡೆದಿತ್ತು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.
ಒಟ್ಟಾರೆ ಬಡ ಕುರಿಗಾಹಿ ಮೇಕೆ ಹಾಗೂ ಕುರಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಸರ್ಕಾರ ನೀಡುವ ಪರಿಹಾರದಿಂದ ಬದುಕು ಕಟ್ಟಿಕೊಳ್ಳಲು ಅಂಗಲಾಚುತ್ತಿದ್ದಾರೆ.
Kshetra Samachara
12/07/2022 07:06 pm