ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಧಾರವಾಡದಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.
ಭದ್ರಾವತಿಯಿಂದ ರ್‍ಯಾಪಿಡ್ ಆ್ಯಕ್ಷನ್ ಪೋರ್ಸ್ ನ್ನೂ ಕರೆಯಿಸಲಾಗಿದ್ದು, ಜೊತೆಗೆ ಕೆಎಸ್‌ಆರ್‌ಪಿ ಪೊಲೀಸರು ಕೂಡ ಧಾರವಾಡ ಶ್ರೀನಗರ ವೃತ್ತದಿಂದ ರೂಟ್ ಮಾರ್ಚ್ ಮಾಡಿದರು.
ʼಅಗ್ನಿಪಥʼ ವಿರೋಧಿಸಿ ಮೊನ್ನೆಯಷ್ಟೇ ಧಾರವಾಡದಲ್ಲಿ ನಡೆದಿದ್ದ ಪ್ರತಿಭಟನೆ ಲಘು ಲಾಠಿ ಪ್ರಹಾರಕ್ಕೆ ಕಾರಣವಾಗಿತ್ತು. ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಸರ್ಕಾರದ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸರು ಮುಂಜಾಗರೂಕತೆ ಕ್ರಮವಾಗಿ ಯಾರೂ ಪ್ರತಿಭಟನೆ ನಡೆಸದಂತೆ ರೂಟ್ ಮಾರ್ಚ್ ಮಾಡುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಭದ್ರಾವತಿಯಿಂದ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್ ನ 120 ಸಿಬ್ಬಂದಿ ಧಾರವಾಡಕ್ಕೆ ಆಗಮಿಸಿದ್ದಾರೆ.
Kshetra Samachara
20/06/2022 01:36 pm