ಹಬ್ಬಗಳು ಬಂದ್ರೆ ಸಾಕು ಎಲ್ಲರೂ ಮನೆಯಲ್ಲಿ ಸಂತಸ ಸಡಗರದಿಂದ ಹೊಸ ಬಟ್ಟೆ ಧರಿಸಿ, ರುಚಿ ಊಟ ಸವಿಯೋದು ಸಾಮಾನ್ಯ. ಆದರೆ ಪೋಲಿಸ್ ಇಲಾಖೆಯಲ್ಲಿ ಇವೆಲ್ಲವೂ ಉಲ್ಟಾ. ಯಾಕಂದ್ರೆ ಅವರಿಗೆ ಜನರ ರಕ್ಷೆ ಶ್ರೀರಕ್ಷೆ ಎಂಬ ಧ್ಯೇಯದೊಂದಿಗೆ ನಿರಂತರವಾಗಿ ಜನರ ಸೇವೆ ಮಾಡುತ್ತಿದ್ದಾರೆ ಅಷ್ಟಕ್ಕೂ ಅವರು ಇಷ್ಟ ಪಟ್ಟು ಮಾಡುವ ಕೆಲಸ ಹೇಗಿರುತ್ತೆ ಎಂಬುದನ್ನ ತೋರಸ್ತೇವಿ ನೋಡಿ.
ಹಬ್ಬದಲ್ಲಿ ಎಲ್ಲ ಇಲಾಖೆಗೆ ರಜೆ ಸಿಗುತ್ತೆ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಒಂದೆಡೆ ಸೇರಿ ಈ ಆಚರಣೆ ಮಾಡುತ್ತಾರೆ. ಆದರೆ ಪೊಲೀಸರಿಗೆ ಯಾವುದೇ ಹಬ್ಬವಿಲ್ಲ. ಯಾವುದೇ ಸಂಭ್ರಮವಿಲ್ಲ. ಕೇವಲ ಸಮಾಜಕ್ಕೋಸ್ಕರ ಹಬ್ಬದ ಸಂಭ್ರಮಗಳನ್ನ ತ್ಯಾಗ ಮಾಡುವುದು ಹಾಗೂ ಎಲ್ಲರ ರಕ್ಷಣೆ ಇವರ ಕರ್ತವ್ಯವಾಗಿದೆ. ಹಲವಾರು ವಿವಾದಗಳ ನಂತರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ. ಪೊಲೀಸರು ಕುಟುಂಬಗಳನ್ನು ತೊರೆದು ಯಾವುದೇ ಹಬ್ಬದ ಅರಿವೇ ಇಲ್ಲದೆ ಕೇವಲ ಜನರ ಪ್ರಾಣ, ಗಲಭೆಗಳಿಗೆ ಬ್ರೇಕ್ ಹಾಕಿರುವುದು ಹೆಮ್ಮೆಯ ಸಂಗತಿಯೇ ಸರಿ. ಹಗಲು, ರಾತ್ರಿ ಎನ್ನದೇ ತಂದೆ, ತಾಯಿ, ಮಕ್ಕಳು, ಪತ್ನಿ ಸುಂದರ ಕುಟುಂಬ ಬಿಟ್ಟು ಕೇವಲ ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಖುಷಿಯನ್ನು ಪಕ್ಕಕ್ಕಿಡುತ್ತಾರೆ. ಅದಕ್ಕಾಗಿ ಎಷ್ಟು ಹ್ಯಾಟ್ಸ್ ಆಫ್ ಹೇಳಿದರು ಸಾಲದು. ಆಸೆಗಳನ್ನು ಮರೆತು ಕೇವಲ ಸಾರ್ವಜನಿಕರಿಗೋಸ್ಕರ ದುಡಿಯುತ್ತಿರುವುದು ನಿಜಕ್ಕೂ ಗ್ರೇಟ್!
ಇನ್ನು ಪೊಲೀಸರಿಗೆ ಹೊತ್ತು ವೇಳೆ ಇರೊ ಮಾತಿಲ್ಲ. ಯಾವುದೇ ಸಮಯದಲ್ಲಿಯೂ ಕೆಲಸ ಮಾಡಲು ರೆಡಿಯಾಗಿರಲೇಬೇಕು. ಆದರೆ ಅವರಿಗೂ ಒಂದು ಕುಟುಂಬ ಇರುತ್ತದೆ ಎನ್ನುವುದನ್ನು ಎಲ್ಲರೂ ಮರೆತಿರುತ್ತಾರೆ. ಆದರೆ ಅವರ ಕೆಲಸಕ್ಕೆ ಅವರ ಕಾರ್ಯಕ್ಕೆ ಕೇವಲ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಎಲ್ಲರೂ ಅವರನ್ನು ಗೌರವಿಸುವುದು ಪತ್ರಿಯೊಬ್ಬ ಪ್ರಜೆಯ ಕರ್ತವ್ಯ. ಮತ್ತೊಮ್ಮೆ ಪೊಲೀಸ್ ಇಲಾಖೆಗೆ ನಮ್ಮ ಕಡೆಯಿಂದ ಹ್ಯಾಟ್ಸಾಪ್!
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ಈರಣ್ಣ ವಾಲಿಕಾರ, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2022 02:33 pm