ಅದು ಬಹುಕೋಟಿ ಮೊತ್ತದ ಹಗರಣ. ಆ ಒಂದೇ ಒಂದು ಕಂಪನಿ ನಂಬಿ ಜನರಿಂದ ಪಾಲಸಿಗೋಸ್ಕರ ಹಣ ಪಡೆದವರು ಇಂದಿಗೂ ಒದ್ದಾಡುತ್ತಿದ್ದಾರೆ. ಆ ಕಂಪನಿ ಮಾಡಿದ ಮೋಸದಿಂದಾಗಿ ಅದರ ಏಜೆಂಟರು ಇದೀಗ ಸಾಯಲು ಆಗದೇ ಬದುಕಲೂ ಆಗದೇ ನರಳಾಡುತ್ತಿದ್ದಾರೆ.
ಹೌದು! ಹಾಗಿದ್ರೆ ಯಾವುದು ಆ ಕಂಪನಿ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.
ಪರ್ಲ್ಸ್ ಎಂಬ ಚಿಟ್ಸ್ಫಂಡ್ ಕಂಪನಿ ಜನರಿಂದ ಹಣ ಪಡೆದು ಆ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ ಎಂದು ಜನರ ಹಣವನ್ನು ಕೊಳ್ಳೆ ಹೊಡೆದಿದ್ದು, ಎಲ್ಲರಿಗೂ ಗೊತ್ತೇ ಇದೆ. ಆದರೆ, ಈ ಕಂಪನಿ ನಂಬಿ ಪರ್ಲ್ಸ್ ಕಂಪನಿಯ ಏಜೆಂಟ್ರಾಗಿ ಜನರಿಂದ ಹಣ ಪಾವತಿ ಮಾಡಿಸಿಕೊಂಡವರ ಪಾಡು ಇದೀಗ ಹೇಳತೀರದಾಗಿದೆ.
ಇಂತಹ ಚಿಟ್ಸ್ ಫಂಡ್ ಕಂಪನಿಗಳು ಮಾಡಿದ ಮೋಸದಿಂದಾಗಿ ಇದೀಗ ಹಣ ಪಡೆದ ಏಜೆಂಟರು ಮತ್ತು ಹಣ ತುಂಬಿದವರು ಹಣ ವಾಪಸ್ ಬರದೇ ಒದ್ದಾಡುತ್ತಿದ್ದಾರೆ. ಹಣ ಕೊಟ್ಟವರು ಏಜೆಂಟರ್ ಮನೆಗಳಿಗೆ ಬಂದು ನಮ್ಮ ಹಣ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಏಜೆಂಟರು ಜನ ಕೊಟ್ಟ ಹಣವನ್ನು ಕಂಪನಿಗೆ ತುಂಬಿ, ಕಂಪೆನಿ ಒಳ್ಳೆಯದಿರಬಹುದು ಎಂದು ನಂಬಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಈ ಪರ್ಲ್ಸ್ ಕಂಪನಿ ಬಾಗಿಲು ಮುಚ್ಚಿಕೊಂಡು ಹೋಗಿದ್ದರಿಂದ ಇದೀಗ ಏಜೆಂಟರು ಹಣ ಕೊಟ್ಟವರಿಗೆ ಉತ್ತರ ಕೊಡಬೇಕಾಗಿದೆ.
ಧಾರವಾಡ ಅಷ್ಟೇ ಅಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಪರ್ಲ್ಸ್ ಕಂಪನಿ ನಂಬಿ ಜನರಿಂದ ದುಡ್ಡು ತಂದು ಹಾಕಿದವರು ಸಾಕಷ್ಟಿದ್ದಾರೆ. ಇದೀಗ ಸಿಬಿಐ ತನಿಖೆಯಿಂದಾಗಿ ಆ ಪರ್ಲ್ಸ್ ಕಂಪನಿ ಮುಚ್ಚಿ ಹೋಗಿದ್ದು, ಈ ಏಜೆಂಟ್ ರಿಗೆ ದಿಕ್ಕು ತೋಚದಂತಾಗಿದೆ.
ಜನರಿಂದ ಹಣ ಪಡೆದು ಪಾಲಸಿಗೋಸ್ಕರ್ ಕಂಪನಿಗೆ ಹಣ ತುಂಬಿದ ಏಜೆಂಟರಿಗೆ ಇದುವರೆಗೂ ತುಂಬಿದ ಹಣ ವಾಪಸ್ ಬಂದಿಲ್ಲ. ಹೀಗಾಗಿ ಹಣ ತುಂಬಿದ ಜನ ಏಜೆಂಟ್ ರ ಮನೆಗಳಿಗೆ ಹೋಗಿ ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಅಡಕೊತ್ತಿನಲ್ಲಿ ಅಡಿಕೆ ಸಿಕ್ಕಂತಾಗಿದೆ ಈ ಏಜೆಂಟರ್ ಪರಿಸ್ಥಿತಿ. ಇವರ ನೋವನ್ನು ಯಾರೂ ಕೇಳಲಾರದಂತಾಗಿದ್ದು, ನಮಗೇನಾದರೂ ದಾರಿ ಮಾಡಿಕೊಡಿ ಎಂದು ಏಜೆಂಟರು ಮನವಿ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/06/2022 08:30 pm