ನೆತ್ತಿ ಸುಡುವ ಉರಿ ಬಿಸಿಲನಲ್ಲಿ ಕುಂದಗೋಳ ಪಟ್ಟಣ ಬಿಟ್ಟು ಎರಡು ಕಿ.ಮೀ ದೂರದ ರೈತ ಸಂಪರ್ಕ ಕೇಂದ್ರಕ್ಕೆ ಮುಂಗಾರು ಬೀಜ ಪಡೆಯಲು ರೈತರು ಹರಸಾಹಸ ಪಡುವ ಸ್ಥಿತಿಗೆ ಉತ್ತರವೇ ಇಲ್ಲದಾಗಿದೆ ನೋಡಿ.
ಹೌದು ! ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಪಡೆಯಲು ಬಂದ ರೈತರು ಉರಿ ಬಿಸಿಲಿನಲ್ಲಿ ಈ ರೀತಿ ಕಾಯುತ್ತಾ ಸರದಿ ಸಾಲಿನಲ್ಲಿ ನಿಂತಿದ್ದರೂ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಕೊರತೆ ಕಾರಣ ಸರಿಯಾದ ಸಮಯಕ್ಕೆ ರೈತರಿಗೆ ಬೀಜ ತಲುಪದೆ ವಿತರಣೆ ಕಾರ್ಯ ವಿಳಂಬವಾಗಿದೆ. ನಿತ್ಯ ಕಚೇರಿ ಬಾಗಿಲು ತೆರೆಯುವ ಮುನ್ನವೇ ಸರದಿ ಸಾಲಿನಲ್ಲಿ ನಿಂತ ರೈತರಲ್ಲೇ ವಾಗ್ವಾದ ಆರಂಭವಾಗಿದ್ದು, ಉರಿ ಬಿಸಿಲಿನ ತಾಪ ತಾಳಲಾರದೆ ಇತ್ತ ಬೇಗ ಬೀಜವೂ ಸಿಗದೆ ವಯೋವೃದ್ಧರು, ಅಂಗವಿಕಲರು ತಮ್ಮ ಪಾಳೆಗಾಗಿ ಕಾಯುವ ಸ್ಥಿತಿ ಅನ್ನದಾತನನ್ನು ಮತ್ತಷ್ಟೂ ಮೂಲೆಗೆ ತಳ್ಳಿದೆ.
ಇನ್ನೂ ರೈತ ಸಂಪರ್ಕ ಕೇಂದ್ರದಲ್ಲಿ ಮುಖ್ಯವಾಗಿ ಸರಿಯಾದ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಇರದ ಕಾರಣ ಬೀಜ ವಿತರಣೆ ಪ್ರಕ್ರಿಯೆ ವಿಳಂಬವಾಗಿದ್ದು ಸ್ಥಳೀಯ ಪಟ್ಟಣ ಪಂಚಾಯಿತಿ, ತಾಲೂಕು ಆಡಳಿತ ಅಷ್ಟೇಯಾಕೆ ಸಹಾಯಕ ಕೃಷಿ ನಿರ್ದೇಶಕರು ಉರಿ ಬಿಸಿಲ ರಕ್ಷಣೆಗಾಗಿ ತಲೆ ಮೇಲೆ ಕೈ ಹೊತ್ತು ನಿಲ್ಲುವ ರೈತರಿಗೆ ಕೊಂಚ ನೆರಳು, ಕುಡಿಯಲು ನೀರು ಕಲ್ಪಿಸದೆ ಇರುವುದು ನ್ಯಾಯವಾ ಎಂಬುದು ನಮ್ಮ ಪ್ರಶ್ನೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
31/05/2022 02:08 pm