ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಳೆಯಿಂದ ಅದ್ಧೂರಿ ಕೃಷಿ ಮೇಳ; ಶೃಂಗಾರಮಯ ಕೃಷಿ ವಿಶ್ವವಿದ್ಯಾಲಯ

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿಂತು ಹೋಗಿದ್ದ ಧಾರವಾಡದ ಕೃಷಿ ಮೇಳ ಪ್ರಸಕ್ತ ವರ್ಷ ಅದ್ಧೂರಿಯಿಂದ ನಡೆಯಲಿದೆ.

ನಾಳೆಯಿಂದ ಆರಂಭಗೊಳ್ಳುವ ಕೃಷಿ ಮೇಳ ನಾಲ್ಕು ದಿನಗಳ ಕಾಲ ನಡೆಯಲಿದೆ. ಅದಕ್ಕಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮದುವಣಗಿತ್ತಿಯಂತೆ ಸಿದ್ಧಗೊಂಡಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಈ ಕೃಷಿ ವಿಶ್ವವಿದ್ಯಾಲಯವು ವಿವಿಧ ಸಸ್ಯ ತಳಿ, ಬೀಜೋತ್ಪಾದನೆಯಲ್ಲಿ ಮುಂದೆ ಇದೆ. ಹೀಗಾಗಿ ಈ ವಿಶ್ವವಿದ್ಯಾಲಯವು ನಡೆಸುವ ಕೃಷಿ ಮೇಳಕ್ಕೆ ರಾಜ್ಯ ಅಷ್ಟೇ ಅಲ್ಲದೆ, ಹೊರ ರಾಜ್ಯಗಳಿಂದಲೂ ರೈತರು ಬರುತ್ತಾರೆ. ಈ ವರ್ಷದ ಕೃಷಿ ಮೇಳದಲ್ಲಿ ಸುಮಾರು 10 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈಗಾಗಲೇ ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲಾ ಸಿದ್ಧತೆ ನಡೆಯುತ್ತಿದ್ದು, ಸ್ಟಾಲ್‌ಗಳನ್ನೂ ಹಾಕಲಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆ ಕೂಡ ನಿರ್ಮಾಣವಾಗಿದ್ದು, ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಕೃಷಿ ವಸ್ತು ಪ್ರದರ್ಶನದಲ್ಲಿ 184 ಹೈಟೆಕ್ ಮಳಿಗೆಗಳು, 364 ಸಾಮಾನ್ಯ ಮಳಿಗೆಗಳು, 21 ಯಂತ್ರೋಪಕರಣ ಮಳಿಗೆಗಳು, 27 ಆಹಾರ ಮಳಿಗೆಗಳು, 54 ಜಾನುವಾರು ಪ್ರದರ್ಶನ ಮಳಿಗೆಗಳು, 9 ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ನಾಳೆ ಫಲಪುಷ್ಪ, ಗೆಡ್ಡೆ ಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಹಾಗೂ ಬೀಜ ಮೇಳದ ಪ್ರದರ್ಶನ ನಡೆಯಲಿದೆ.

ಆದರೆ, ನಿರಂತರ ಸುರಿಯುತ್ತಿರುವ ಮಳೆ ಮೇಳಕ್ಕೆ ಕೊಂಚ ಅಡಚಣೆಯನ್ನುಂಟು ಮಾಡಬಹುದು. ವಿಶ್ವವಿದ್ಯಾಲಯದ ಆವರಣ ಮಳೆಯಿಂದಾಗಿ ಕೆಸರುಮಯವಾಗಿದೆ. ಒಟ್ಟಾರೆಯಾಗಿ ಚತುರ್ದಿನ ಧಾರವಾಡದಲ್ಲಿ ಸಂಭ್ರಮದ ರೈತರ ಜಾತ್ರೆ ನಡೆಯಲಿದ್ದು, ಅದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2022 04:19 pm

Cinque Terre

140.19 K

Cinque Terre

2

ಸಂಬಂಧಿತ ಸುದ್ದಿ