ಧಾರವಾಡದ ಕೃಷಿ ಇಲಾಖೆಯ ಅಧಿಕಾರಿಗಳ ಮಹಾ ಎಡವಟ್ಟು ಬಯಲು ಮಾಡುತ್ತಿದೆ ನಿಮ್ಮ ಪಬ್ಲಿಕ್ ನೆಕ್ಸ್ಟ್.
ಹೌದು ! ಪರಿಹಾರ ಡಾಟಾ ಎಂಟ್ರಿ ರಿಪೋರ್ಟ್‌ನಲ್ಲಿ ಎರಡೂ ತಾಲೂಕುಗಳನ್ನೇ ಕೃಷಿ ಅಧಿಕಾರಿಗಳು ಕೈಬಿಟ್ಟಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರಿಗೆ ಕೈ ತಪ್ಪುತ್ತಿದೆ ಪರಿಹಾರ.
ಎಸ್.! ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅನ್ನದಾತ ಹಿಡಿಶಾಪ ಹಾಕುತ್ತಿದ್ದಾನೆ. ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಪರಿಹಾರ ಡಾಟಾ ಎಂಟ್ರಿ ಪ್ರೋಗ್ರೇಸ್ ರಿಪೋರ್ಟ್ ಲಭ್ಯವಾಗಿದೆ. ಈ ರಿಪೋರ್ಟ್‌ನಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈ ಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಪಬ್ಲಿಕ್ ನೆಕ್ಸ್ಟ್ ಬಯಲು ಮಾಡುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಅಣ್ಣಿಗೇರಿ ಕಲಘಟಗಿ ಹಾಗೂ ಅಳ್ನಾವರ ಈ ತಾಲೂಕುಗಳಿವೆ. ಆದ್ರೆ, ಪಬ್ಲಿಕ್ ನೆಕ್ಸ್ಟ್'ಗೆ ಸಿಕ್ಕ ದಾಖಲೆಯಲ್ಲಿ ಕಲಘಟಗಿ ಮತ್ತು ಅಳ್ನಾವರ ಎರಡು ತಾಲೂಕುಗಳು ನಾಪತ್ತೆಯಾಗಿದ್ದು, ಧಾರವಾಡ ಜಿಲ್ಲೆಯ ಏಳು ತಾಲೂಕಿನಲ್ಲಿಯೂ ಅತಿವೃಷ್ಟಿಯಾಗಿದೆ.
ಅದರಲ್ಲೂ ಕಲಘಟಗಿ ಮತ್ತು ಅಳ್ನಾವರ ತಾಲೂಕಿನಲ್ಲಿ ಅಧಿಕಾರಿಗಳ ಅಂಕಿ ಅಂಶದ ಪ್ರಕಾರ 18 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ಸೋಯಾಬಿನ್ ಮತ್ತು ಮೆಕ್ಕೆಜೋಳ ಬೆಳೆಗಳು ನೆಲಕಚ್ಚಿವೆ ಎಂದು ಈಗಾಗಲೇ ವರದಿ ನೀಡಿದ ಅಧಿಕಾರಿಗಳು ಡಾಟಾ ಎಂಟ್ರಿಯಲ್ಲಿ ಮಾತ್ರ ಎರಡು ತಾಲೂಕುಗಳನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಈ ನಿರ್ಲಕ್ಷ್ಯ ಯಾಕೆ ?
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/09/2022 05:36 pm