ರಾಜ್ಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ರೈತರ ಕೃಷಿ ಪಂಪಸೆಟ್ ಗಳಿಗೆ ಮಿಟರ್ ಅಳವಡಿಕೆ ಮಾಡಲು ಮುಂದಾಗುತ್ತಿದ್ದು ಈ ಒಂದು ಕ್ರಮವನ್ನು ಕೂಡಲೆ ನಿಲ್ಲಿಸಬೇಕು ಎಂದು ಕಲಘಟಗಿಯಲ್ಲಿ ರೈತರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಇಗಾಗಲೆ ರೈತರು ಬೆಳೆಹಾನಿಗಳಿಂದ ಸಂಕಷ್ಟದಲ್ಲಿದ್ದು ಸರಕಾರ ರೈತರ ಮೇಲೆ ಮತ್ತೊಂದು ಬರೆ ಎಳೆಯುವ ಕೆಲಸ ಮಾಡಬಾರದು ಒಂದು ವೇಳೆ ರಾಜ್ಯದಲ್ಲಿ ಮಿಟರ ಅಳವಡಿಕೆ ಮಾಡಿದ್ದಾದಲ್ಲಿ ರಾಜ್ಯಾದ್ಯಂತ ರೈತರು ಉಗ್ರಾವಾದ ಹೋರಾಟ ಮಾಡುವುದಾಗಿ ತಿಳಿಸಿದರು.
ಅದೆ ರೀತಿ ಕಲಘಟಗಿ ತಾಲೂಕಿನ ಗ್ರಾಮೀಣ ಬಾಗದಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿದ್ದು ಶಾಲಾ ಮಕ್ಕಳಿಗೆ ಹಾಗೂ ರೈತರ ಹೊಲಗಳಿಗೆ ತೊಂದರೆ ಯಾಗುತ್ತಿದೆ ಕೂಡಲೆ ಅಧಿಕಾರಿಗಳು ಈ ಒಂದು ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಸಲ್ಲಿಸಿದರು.
Kshetra Samachara
09/09/2022 06:27 pm