ನವಲಗುಂದ : ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಕಾಯಂಗಿಳಿಸುವ ಹಾಗೂ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಎಐಯುಟಿಸಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ರಮೇಶ್ ಹೊಸಮನಿ, ಕಾರ್ಮಿಕ ವಿರೋಧಿ, ಲೇಬರ್ ಮತ್ತು ರೈತ ವಿರೋಧಿ ಕಾಯ್ದೆ ಹಿಂಪಡೆಯಬೇಕು, ಮಾಸಿಕ ಇಪ್ಪತ್ತೊಂದು ಸಾವಿರ ರೂಪಾಯಿ ಕನಿಷ್ಠ ವೇತನ ನೀಡಬೇಕು, ವಲಸೆ ಕಾರ್ಮಿಕರಿಗೆ ಮೂಲಸೌಕರ್ಯ ಒದಗಿಸಬೇಕು, ಬೆಲೆ ಏರಿಕೆ ತಡೆಗಟ್ಟಿ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಉದ್ಯೋಗ ನೀಡಬೇಕು ಎಂಬ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸರೋಜಾ ಮಡಿವಾಳರ, ಮೈತ್ರಿ, ಮಂಗಳಾ ಹೂಗಾರ, ಚನ್ನಮ್ಮ ಶಿವಬಸಪ್ಪನವರ, ರಾಜಬಿ ನದಾಫ, ಸುಮಿತ್ರಾ ಮೆಣಸಿನಕಾಯಿ, ಉಮಾದೇವಿ, ವಿಜಯ್ ದ್ರಾಕ್ಷಾಯಿಣಿ ಸೇರಿದಂತೆ ಹಲವರು ಇದ್ದರು.
Kshetra Samachara
30/10/2021 04:10 pm