ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಲಸಿಕಾ ಮಹಾ ಮೇಳಕ್ಕೆ ಸಾರ್ವಜನಿಕರು ಸ್ಪಂದನೆ ನೀಡಬೇಕು

ನವಲಗುಂದ: ಕೋವಿಡ್ ಸೋಂಕು ತಡೆಗಟ್ಟಲು ಶುಕ್ರವಾರ ಬೃಹತ್ ಲಸಿಕಾ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಧಾರವಾಡ ಜಿಲ್ಲಾ ಉಪಾಧ್ಯಕ್ಷ ಮಾಬುಸಾಬ ಯರಗುಪ್ಪಿ ತಿಳಿಸಿದರು.

ನಗರದ 15ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜನೆ ಮಾಡಲಾದ ಲಸಿಕಾ ಮಹಾಮೇಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಲಸಿಕೆ ಪಡೆಯುವದರಿಂದ ಕೋವಿಡ ಮಹಾಮಾರಿಯಿಂದ ಪಾರಾಗಬಹುದು, ಎಲ್ಲವೂ ಸರ್ಕಾರವೇ ಮಾಡಬೇಕೆಂದರೆ ಆಗುವುದಿಲ್ಲಾ, ಸಾರ್ವಜನಕರು ಸಹ ಸಹಕಾರ ನೀಡುವುದರ ಮೂಲಕ ಎಲ್ಲರು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಾಜೇಂದ್ರ ಕಮತರ, ಹಿರಿಯರಾದ ಎನ್ ಪಿ ಕುಲಕರ್ಣಿ, ಅಡಿವೆಪ್ಪ ಶಿರಸಂಗಿ, ಟಿ. ಎಪ್ ಮರಿಯಪ್ಪಗೌಡ್ರ, ಪುರಸಭೆ ಸಮುದಾಯ ಸಂಘಟನಾ ಅಧಿಕಾರಿ ಜೆ. ಸಿ. ಹೂಗಾರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಶರಣಪ್ಪ ಕಡ್ಲಿಬಿಷ್ಠಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ರೇಣುಕಾ ಮುಳಗುಂದ, ಅಂಗನವಾಡಿ ಕಾರ್ಯಕರ್ತೆ ಭಾರತಿ ಹಳಮನಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/09/2021 07:13 pm

Cinque Terre

26.36 K

Cinque Terre

0

ಸಂಬಂಧಿತ ಸುದ್ದಿ