ಪಟ್ಟಣ ಪಂಚಾಯತ್ ಆವರಣದಲ್ಲಿ ಫಲಾನುಭವಿಗಳಿಗೆ ಕಸದ ಬುಟ್ಟಿ ಹಾಗೂ ಕಸ ಸಂಗ್ರಹಿಸುವ ವಾಹನವನ್ನು ಶಾಸಕಿ ಕುಸುಮಾವತಿ ಶಿವಳ್ಳಿ ನೀಡಿದ್ರು.
ಬಳಿಕ ಮಾತನಾಡಿದ ಅವರು ಸಾರ್ವಜನಿಕರು ಪ್ಲಾಸ್ಟಿಕ್, ಕಸ ಕಡ್ಡಿ, ಹಸಿ ತ್ಯಾಜ್ಯ ಒಣ ತ್ಯಾಜ್ಯ ವಿಂಗಡಣೆ ಮಾಡಿ ಸ್ವಚ್ಛತೆಯನ್ನು ಕಾಪಾಡಲು ಪ್ರತಿ ಮನೆಗೆ 2 ಬುಟ್ಟಿ ವಿತರಿಸಿದ್ದೇವೆ. ಹಾಗೂ ಕಸ ಸಂಗ್ರಹಿಸಲು ವಾಹನ ನೀಡಿದ್ದೇವೆ ಎಂದು ಹೇಳಿದರು.
ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಗುಡೇನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಅತಿವೃಷ್ಟಿ ಪರಿಣಾಮ ಉಂಟಾದ ಹಾನಿ ಪರಿಶೀಲನೆ ನಡೆಸಿ ಮನೆ ಕಳೆದುಕೊಂಡವರಿಗೆ ಪರಿಹಾರದ ಭರವಸೆ ನೀಡಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ, ಉಪಾಧ್ಯಕ್ಷ ಹಣುಮಂತಪ್ಪ ರಣತೂರ, ಸರ್ವ ಸದಸ್ಯರು ಹಾಗೂ ಮುಖ್ಯಾಧಿಕಾರಿ ನಾರಾಯಣ್ ಡೊಂಬರ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
14/07/2022 03:36 pm