ಸಮಾಜ ಕಲ್ಯಾಣ ಇಲಾಖೆಯಿಂದ 2016-17 ರಲ್ಲೇ ಮಂಜೂರಾದ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಬೇಗನೆ ಪೂರ್ಣ ಮಾಡುವಂತೆ ತಾಪಂ ಆಡಳಿತಾಧಿಕಾರಿ ಸಿದ್ದಣ್ಣ ಟಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್.ವೀರಕರ್ ಅವರಿಗೆ ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅರಣ್ಯ ಅಭಿವೃದ್ಧಿ ಕುರಿತು ವರದಿ ನೀಡಿ ಮರಗಳ ಉಳಿವಿನ ಕ್ರಮದ ಕುರಿತು ಚರ್ಚಿಸಿದರು. ಇದೇ ವೇಳೆ ವ್ಯಯಕ್ತಿಕ ಶೌಚಾಲಯ ಸ್ವಚ್ಚ ಮಾಡುವಾಗ ಪ್ರಾಣತೆತ್ತ ಕುಟುಂಬಕ್ಕೆ ಪರಿಹಾರದ ಹಣ ಬಿಡುಗಡೆಗೆ ನಮ್ಮಲ್ಲಿ ಹಣದ ಕೊರತೆ ಇದೆ ಎಂದು ಪಿಡಿಓ ತುಪ್ಪದಗೌಡ್ರ ತಿಳಿಸಿದರು.
ಅಕ್ಷರದಾಸೋಹ ಅಧಿಕಾರಿಗಳು ಮಾತನಾಡಿ ತಮ್ಮಲ್ಲಿನ ಅಡುಗೆ ಸಹಾಯಕರ ನೇಮಕಾತಿ ಕುರಿತು ವರದಿ ಸಲ್ಲಿಸಿದರೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ನಮ್ಮಲ್ಲಿ ಸಂಚಾರ ಪಶು ಚಿಕಿತ್ಸಾ ವಾಹನ ಬರಲಿದ್ದು ರಾಸುಗಳಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದರು, ಈಗಾಗಲೇ ಚಿಕಿತ್ಸೆ ಉತ್ತಮವಾಗಿದ್ದು ಕೆಲ ಭಾಗಗಳಲ್ಲಿ ಕೊರತೆ ಇರುವ ವೈದ್ಯರ ಹುದ್ದೆ ಕುರಿತು ಸ್ಪಷ್ಟನೆ ನೀಡಿದರು.
ಇನ್ನೂಳಿದಂತೆ ಆರೋಗ್ಯ ಇಲಾಖೆ, ಹೆಸ್ಕಾಂ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಮಾಹಿತಿ ನೀಡಿದರು, ಈ ವೇಳೆ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಬೆಳಕಿನ ವ್ಯವಸ್ಥೆ ದೋಷ ಎದ್ದು ಕಂಡರೆ, ಕೆಲ ಅಧಿಕಾರಿಗಳು ಮೊಬೈಲ್ ಬಳಸುವುದು ಕಂಡು ಬಂದಿತು.
Kshetra Samachara
29/06/2022 05:27 pm