ಧಾರವಾಡ: ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ದೇಶಕ್ಕೆ ತೆರಳಿದ್ದ ಧಾರವಾಡದ ವಿದ್ಯಾರ್ಥಿನಿ ಫೌಜಿಯಾ ಮುಲ್ಲಾ ಅವರು ಇಂದು ಬೆಳಿಗ್ಗೆ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಉಕ್ರೇನ್ ದೇಶದ ತೆಮೊಪಿಲ್ ( Temopil medical University) ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸೆಮಿಸ್ಟರ್ ಅಧ್ಯಯನ ಮಾಡುತ್ತಿದ್ದ ಫೌಜಿಯಾ ಅವರು ಅನಿರೀಕ್ಷಿತವಾಗಿ ಉಕ್ರೇನ್-ರಷ್ಯಾ ಯುದ್ದ ಆರಂಭವಾಗಿದ್ದರಿಂದ ತೊಂದರೆಗೆ ಒಳಗಾಗಿದ್ದರು. ಭಾರತ ಸರ್ಕಾರದ ಆಪರೇಶನ್ ಗಂಗಾ ಮೂಲಕ ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದಿರುವ ಫೌಸಿಯಾ, ಮುಂದಿನ ಕೆಲವು ದಿನಗಳ ಕಾಲ ಬೆಂಗಳೂರಿನ ಅವರ ಸಹೋದರನ ಮನೆಯಲ್ಲಿ ವಿಶ್ರಾಂತಿ ಪಡೆದು, ನಂತರ ಧಾರವಾಡಕ್ಕೆ ಆಗಮಿಸಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 02:17 pm