ಹುಬ್ಬಳ್ಳಿ: ಅದು ಜನಪ್ರಿಯ ಸಾರ್ವಜನಿಕ ಸೇವೆ.ಕೆಲವೊಂದು ಬೇಡಿಕೆ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬಂದ್ ಆಗಿದ್ದ ಸೇವೆ ಇಂದು ಏಕಾಏಕಿ ಪ್ರಾರಂಭಗೊಂಡಿದೆ.ಈ ಸೇವೆಗೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದ್ದಾರೆ.ಅಷ್ಟಕ್ಕೂ ಆ ಸೇವೆ ಯಾವುದು..ಅಧಿಕಾರಿಗಳು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ ಮುಷ್ಕರಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಸಾಕಷ್ಟು ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಆದ್ರೆ ಸಾರ್ವಜನಿಕರು ಮಾತ್ರ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಂತೂ ಸತ್ಯ.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುತುವರ್ಜಿಯಿಂದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನೌಕರರನ್ನು ಮನವೊಲಿಸಿ ಇಂದು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈಗಾಗಲೇ ಹು-ಧಾ ಗ್ರಾಮೀಣ ಸಾರಿಗೆ,ನಗರ ಸಾರಿಗೆ ಹಾಗೂ ಬಿ.ಆರ್.ಟಿ.ಎಸ್ ಬಸ್ ಕೂಡ ಕಾರ್ಯಾಚರಣೆ ನಡೆಸುತ್ತಿದೆ.ಇನ್ನೂ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಸಂಚರಿಸಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಈಗಾಗಲೇ ಸಾರಿಗೆ ಸಂಸ್ಥೆ ಬಸ್ ಹಾಗೂ ಚಿಗರಿ ಬಸ್ ಸಂಚಾರ ಪ್ರಾರಂಭವಾಗಿದ್ದರೂ ಕೂಡ ಖಾಸಗಿ ಬಸ್ ಫುಲ್ ಆಗುತ್ತಿವೆ.ವಿನಃ ಸರ್ಕಾರಿ ಬಸ್ ಮಾತ್ರ ಖಾಲಿ ಖಾಲಿ ನಿಂತುಕೊಂಡಿವೆ.ಸಾರ್ವಜನಿಕರು ಮಾತ್ರ ಇನ್ನೂ ಬಸ್ ಸಂಚಾರ ಆರಂಭವಾಗಿಲ್ಲ ಎಂಬುವಂತ ಗೊಂದಲದಲ್ಲಿದ್ದಾರೆ.ಆದರೇ ಬಸ್ ಸಂಚಾರ ಆರಂಭಗೊಂಡಿದ್ದು,ಪೂರ್ಣ ಪ್ರಮಾಣದ ಬಸ್ ಸಂಚಾರ ಪ್ರಾರಂಭಿಸುವುದಾಗಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಕೃಷ್ಣ ಬಾಜಪೇಯಿ ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಬಂದ್ ಆಗಿದ್ದ ಸಾರಿಗೆ ಸೇವೆ ಇಂದಿನಿಂದ ಪ್ರಾರಂಭಗೊಂಡಿದ್ದು,ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಬಿಳದೇ ಸಂಚರಿಸಬಹುದಾಗಿದೆ.ಈಗಾಗಲೇ ನೌಕರರು ಕರ್ತವ್ಯಕ್ಕೆ ಆಗಮಿಸಿದ್ದು,ಜನರು ತಮ್ಮಲ್ಲಿರುವ ಭಯವನ್ನು ಬಿಟ್ಟು ತಮ್ಮ ತಮ್ಮ ಊರುಗಳಿಂದ ಪ್ರಯಾಣಿಸಬಹುದಾಗಿದ್ದು,ಸಾರಿಗೆ ಸಂಚಾರ ಯಥಾಸ್ಥಿತಿ ಕಾಯ್ದುಕೊಂಡಿದೆ.
Kshetra Samachara
14/12/2020 03:50 pm