ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳನ್ನು ಖಾತರಿ ಪಡಿಸಲಾಗಿದೆ:ನ್ಯಾಯಾಧೀಶ ಕೆ.ಎನ್.ಗಂಗಾಧರ

ಹುಬ್ಬಳ್ಳಿ: ಸಂವಿಧಾನ ಹಾಗೂ ಕಾನೂನಿನಡಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳನ್ನು ಖಾತರಿ ಪಡಿಸಲಾಗಿದೆ. ಕಾರಾಗೃಹ ವಾಸದಲ್ಲಿ ಇರುವ ಆಪಾದಿತರು ಹಾಗೂ ಅಪರಾಧಿಗಳಿಗೂ ಸಹ ಮಾನುವ ಹಕ್ಕುಗಳ ಅನ್ವಯವಾಗುತ್ತವೆ ಎಂದು ಐದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಎನ್.ಗಂಗಾಧರ ಹೇಳಿದರು.

ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಉಪಕಾರಾಗೃಹದಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಉಪ ಕಾರಾಗೃಹ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ಅಪರಾಧವನ್ನು ದೂಷಿಸಬೇಕು ಅಪರಾಧಿಗಳನ್ನಲ್ಲ. ಶಿಕ್ಷೆಯ ಮೂಲ ಉದ್ದೇಶ ಮನಪರಿವರ್ತನೆ. ಸಂದರ್ಭ, ಆಸೆ ಆಕಾಂಕ್ಷೆ, ದ್ವೇಷಗಳಿಗೆ ಸಿಲುಕಿ ಅಪರಾಧಗಳು ಘಟಿಸುತ್ತವೆ. ಈ ಘಟನೆಗಳಿಗೆ ಪಶ್ಚಾತ್ತಾಪ ಪಟ್ಟು ಕಾರಾಗೃಹದಲ್ಲಿ ಬದಲಾವಣೆ ಹೊಂದಬೇಕು. ದೇವರ ಧ್ಯಾನ, ಒಳ್ಳೆಯ ಚಿಂತೆನೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಿ. ಮಾನವನಿಗೆ ಸ್ವಾತಂತ್ರ್ಯ ಅತಿ ಮುಖ್ಯವಾದದು. ಜೈಲಿನಲ್ಲಿ ಸವಲತ್ತುಗಳನ್ನು ಒದಿಸಬಹುದು. ಆದರೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಿಲ್ಲ. ಹೊರ ಸಮಾಜದಿಂದ ಕುಟುಂಬದಿಂದ ದೂರ ಇದ್ದು ಅನುಭವಿಸುವ ನೋವಿಗಿಂತ. ಉತ್ತಮ ವರ್ತನೆ ತೋರಿಸಿ ಜೈಲಿನಿಂದ ಬಿಡುಗಡೆ ಹೊಂದಿ. ಪ್ರತಿಯೊಂದು ವ್ಯವಸ್ಥೆಯಲ್ಲೂ ಲೋಪದೋಷಗಳು ಇರುತ್ತವೆ. ವ್ಯವಸ್ಥೆಯನ್ನು ಬದಲಾಯಿಸುವ ಮುನ್ನ ನಾವು ಸಕಾರಾತ್ಮವಾಗಿ ಬದಲಾಗಬೇಕು. ಕೇವಲ 20 ರಿಂದ 25 ವಯಸ್ಸಿನ ಹಲವು ಯುವಕರು ಅಪರಾಧ ಎಸಗಿ ಕಾರಾಗೃಹ ವಾಸದಲ್ಲಿ ತಮ್ಮ ಅಮೂಲ್ಯವಾದ ಜೀವಿತಾವಧಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಾವಧಿಯ ನಂತರೂ ಉತ್ತಮ ಜೀವನ ಕಟ್ಟಿಕೊಳ್ಳು ಅವಕಾಶವಿದೆ ಎಲ್ಲೂರು ಪರಿವರ್ತನೆಗೆ ಒಳಪಟ್ಟು ದೇಶ ಆಸ್ತಿಯಾಗಿ ಎಂದರು.

Edited By : Nagaraj Tulugeri
Kshetra Samachara

Kshetra Samachara

10/12/2020 08:36 pm

Cinque Terre

15.25 K

Cinque Terre

0

ಸಂಬಂಧಿತ ಸುದ್ದಿ