ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮಾಹಿತಿ ಇಲ್ಲದೇ ಸಭೆ ಹಾಜರಾದ ಅಧಿಕಾರಿಗಳಿಗೆ ಸಿಇಒ ಕ್ಲಾಸ್

ಧಾರವಾಡ:ಎಲ್ಲ ಇಲಾಖೆಯ ಅಧಿಕಾರಿಗಳು ಜಿ.ಪಂ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಬರಬೇಕು. ಅದು ಬಿಟ್ಟು ಬಂದು ಸುಮ್ಮನೆ ಕಾಲ ಹರಣ ಮಾಡಿ ಹೋಗುವುದು ಸರಿಯಲ್ಲ. ‌ಇದೇ ರೀತಿ ಮುಂದುವರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ ಸಿಇಒ ಡಾ. ಸುಶೀಲಾ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಕೆಲ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಲಿಲ್ಲ,ಸಣ್ಣ ನೀರಾವರಿ ಇಲಾಖೆಯ ಕಾಲುವೆ ಕಾಮಗಾರಿ ಕಳಪೆ ವಿಚಾರಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾಹಿತಿ ಕೇಳಿದರು.ಮಾಹಿತಿ ಇಲ್ಲದೇ ಬಂದಿದ್ದಕ್ಕೆ‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ಸಿಇಒ ಮಾತನಾಡಿ,ಮಾಹಿತಿ ಇಲ್ಲದೇ ಸಭೆಗೆ ಹಾಜರಾದ ಅಧಿಕಾರಿಗಳಿಗೆ ಸಭೆಗೂ ಮುನ್ನ ಸಮಯಾವಕಾಶ ಇದ್ದರೂ ಮಾಹಿತಿ ಇಲ್ಲದೇ ಬಂದಿದ್ದೀರಿ,ದೂರುಗಳು ಬಂದ ಸ್ಥಳಕ್ಕೆ‌ ಅಧಿಕಾರಿಗಳು ಖುದ್ದು ಭೇಟಿ ನೀಡಬೇಕು, ಪರಿಶೀಲನೆ ನಡೆಸಿ, ಸಭೆಗೆ ಅದರ ಮಾಹಿತಿ ಸಭೆಗೆ ತರಬೇಕು,ಎಲ್ಲ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಪಡೆದುಕೊಂಡು ಬರುವಂತೆ ಅಧಿಕಾರಿಗಳಿಗೆ ಸಿಇಒ ಕ್ಲಾಸ್ ತೆಗೆದುಕೊಂಡರು.

Edited By : Manjunath H D
Kshetra Samachara

Kshetra Samachara

24/11/2020 07:29 pm

Cinque Terre

28.4 K

Cinque Terre

0

ಸಂಬಂಧಿತ ಸುದ್ದಿ