ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಹಾನಿ: ಎರಡನೇ ಹಂತದಲ್ಲಿ 18,538 ರೈತರಿಗೆ 34 ಕೋಟಿ 53 ಲಕ್ಷ ಪರಿಹಾರ ಜಮೆ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅತಿವೃಷ್ಠಿಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 17 ರಂದು ಎರಡನೇ ಹಂತವಾಗಿ 18538 ರೈತ ಫಲಾನುಭವಿಗಳಿಗೆ ಒಟ್ಟು 34 ಕೋಟಿ 53 ಲಕ್ಷ ರೂಪಾಯಿಗಳನ್ನು ನೇರವಾಗಿ ರೈತರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗಿದೆ.

ಪರಿಹಾರ ಎಂಟ್ರಿ ಕಾರ್ಯವು ಪ್ರಗತಿಯಲ್ಲಿದ್ದು ಹಂತ ಹಂತವಾಗಿ ರೈತರಿಗೆ ಪರಿಹಾರ ದೊರಕಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/09/2022 10:17 pm

Cinque Terre

13.91 K

Cinque Terre

1

ಸಂಬಂಧಿತ ಸುದ್ದಿ