ಕುಂದಗೋಳ : ಅಬ್ಬಾ ! ಕೃಷಿ ಬದುಕನ್ನು ಅಕ್ಷರಶಃ ವರುಣದೇವ ಕಷ್ಟದ ಕೂಪಕ್ಕೆ ತಳ್ಳಿದ್ದು ಅತಿವೃಷ್ಟಿಗೆ ಸಿಲುಕಿ ಬೆಳೆ ಕಳೆದುಕೊಂಡ ರೈತರು ಇದೀಗ ಕೃಷಿ ಇಲಾಖೆಗೆ ಮುಗಿ ಬಿದ್ದಿದ್ದಾರೆ.
ಕುಂದಗೋಳ ತಾಲೂಕಿನ ಎಲ್ಲೇಡೆ ಸುರಿದ ಭಾರಿ ಮಳೆಗೆ ಬೆಳೆ ಹಾನಿಯಾದ ರೈತರು 72 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಲು ವಿಮಾ ಕಂಪನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಹೊರಡಿಸಿದ್ದು ರೈತರು ಅರ್ಜಿ ಸಲ್ಲಿಸಲು ಕೃಷಿ ಇಲಾಖೆಯತ್ತ ರೈತರು ಮುಖ ಮಾಡಿದ್ದಾರೆ.
ಅದರಲ್ಲೂ ಧೋ ಎಂದು ಸುರಿಯುವ ಮಳೆ ಶ್ರಾವಣ ಸಣ್ಣ ಸೋಮವಾರ, ಮೊಹರಂ ಹಬ್ಬದ ಆಚರಣೆ ಬದಿಗೊತ್ತಿದ ರೈತರ ದಂಡು ಕೃಷಿ ಇಲಾಖೆಗೆ ಬಂದು ಹಾಳಾದ ಬೆಳೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಕೃಷಿ ಇಲಾಖೆ ಮೇಲ್ಮಹಡಿಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ಅರ್ಜಿ ಪಡೆಯುತ್ತಿದ್ದು ನಿನ್ನೆ ಭಾನುವಾರವೂ ಸಹ ಅರ್ಜಿ ಪಡೆಯುವ ಪ್ರಕ್ರಿಯೆ ನಡೆದಿದ್ದು ರೈತರು ತಂಡೋಪತಂಡವಾಗಿ ಆಗಮಿಸಿ ಬೆಳೆ ಅಂತು ಹೋಯ್ತು ಪರಿಹಾರ ಆದ್ರೂ ಬರಲಿ ಎನ್ನುತ್ತಿದ್ದಾರೆ.
Kshetra Samachara
08/08/2022 06:20 pm