ಕುಂದಗೋಳ: ಬೆಳೆಗಳಿಗೆ ಅಂಟಿದ ರೋಗದ ಪತ್ತೆ, ಕೀಟಗಳ ಬಾಧೆ, ಮಣ್ಣು ಪರೀಕ್ಷೆ, ಉತ್ಪಾದಕತೆ ಸವೆತ, ವಿಪತ್ತು ಹೀಗೆ ಕೃಷಿ ಬೆಳೆಗಳಿಗೆ ಸಂಬಂಧಿತ ಯಾವುದೇ ಸಮಸ್ಯೆಗೆ ಪರಿಹಾರ ನೀಡಬೇಕಾದ ಕೃಷಿ ಸಂಜೀವಿನಿ ವಾಹನದ ಉಪಯೋಗ ರೈತರಿಗೆ ದೊರೆತಿಲ್ಲಾ.
ಹೌದು ! ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಂದ ಚಾಲನೆ ಕಂಡ ಲ್ಯಾಬ್ ಟು ಲ್ಯಾಂಡ್ 'ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ' ಕುಂದಗೋಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ತಲುಪಿ ಬರೋಬ್ಬರಿ 2 ತಿಂಗಳು ಕಳೆದ್ರೂ ವಾಹನಕ್ಕೆ ಟೆಕ್ನಿಕಲ್ ಸಾಮಗ್ರಿ ಒದಗಿಲ್ಲಾ.
ಮುಖ್ಯವಾಗಿ ಹಾರ್ನ್ ಸ್ಪಿಕರ್ಸ್, ಮಿಕ್ಸರ್ ಆಂಪ್ಲಿಫೈಯರ್, ವೈರ್ ಲೆಸ್ ಮೈಕ್, ಔಟ್ ಡೋರ್ ಲೆಡ್ ಸ್ಕ್ರೀನ್ ಸೇರಿದಂತೆ ಸಂಪೂರ್ಣ ಆಟೊಮೇಟೆಡ್ ಮಣ್ಣು, ಜೀವಸತ್ವ ಪರೀಕ್ಷೆಯ ಯಾವುದೇ ಪರಿಕರಗಳು ವಾಹನದಲ್ಲಿ ಇಲ್ಲಾ.
ಕೇವಲ ಬ್ಯಾಟರಿ, ಯುಪಿಎಸ್ ಮೇಲೆ ಮೇ.8 ರಂದು ಕಚೇರಿ ತಲುಪಿದ ವಾಹನ ನಿಂತಲ್ಲೇ ನಿಂತಿದ್ದು ಈ ವಾಹನಕ್ಕೆ ಕೃಷಿ ಇಲಾಖೆ 10 ಲಕ್ಷ 19 ಸಾವಿರದ 200 ನೂರು ವ್ಯಯಿಸಿದ್ದು ಇನ್ನೂ ಚಾಲಕ ಹಾಗೂ ಟೆಕ್ನಿಷಿಯನ್ ಸಿಬ್ಬಂದಿ ಸಹ ವಾಹನಕ್ಕೆ ಬೇಕಾಗಿದ್ದು ಪಾಸಿಂಗ್ ಸಹ ಬಾಕಿ ಇದೆ.
ಧಾರವಾಡ ಜಿಲ್ಲೆಯ ಕಲಘಟಗಿ, ತಬಕದಹೊನ್ನಳ್ಳಿ, ನವಲಗುಂದ, ಮೊರಬ, ಅಣ್ಣಿಗೇರಿಗೂ ಸಹ ಈ ವಾಹನ ಪೊರೈಕೆಯಾಗಿದ್ದು ಅಲ್ಲಿನ ಪರಿಸ್ಥಿತಿ ಏನಿದೆಯೋ ದೇವರೇ ಬಲ್ಲ. ಒಟ್ಟಾರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೈತ ಸಹಾಯವಾಣಿ 155313 ಗೆ ಕರೆ ಮಾಡಿದ್ರೇ ಕುಂದಗೋಳ ತಾಲೂಕಿನಲ್ಲಿ ವಾಹನ ಬರೋಲ್ಲಾ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 04:15 pm