ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂಪಾಯಿ ನಷ್ಟ: ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ

ಧಾರವಾಡ: ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ, ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಅಗ್ರೊ ಕೇಂದ್ರವು 4 ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಯಿತು. ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಯಿತು .

2012-13 ನೇ ಸಾಲಿನ ಸರ್ಕಾರದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದ ಅಡಿ ಬಾಳೆಯ ಬೆಳೆಗಾರರಾಗಿ ಆಯ್ಕೆಯಾಗಿದ್ದ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ರೈತರೊಬ್ಬರಿಗೆ ಕಳಪೆ ಬಾಳೆ ಸಸಿಗಳನ್ನು ಸರಬರಾಜು ಮಾಡಿದ ಅಗ್ರೊ ಕೇಂದ್ರದವರು ಸೇವಾ ನ್ಯೂನ್ಯತೆಯಾಗಿ ಪರಿಹಾರ ಕೊಡಬೇಕು ಎಂಬ ಬೇಡಿಕೆಯೊಂದಿಗೆ 2014 ರಲ್ಲಿ ರೈತ ದಾಖಲಿಸಿದ ಸುಮಾರು 8 ವರ್ಷದ ಹಳೆಯ ಪ್ರಕರಣವನ್ನು ಅದಾಲತ್ ಮೂಲಕ ರಾಜಿಯಾಗಿ ರೈತನಿಗೆ 4 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಯಿತು.

ಲೋಕ ಅದಾಲತ್‌ನಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ನ್ಯಾಯವಾದಿ ಎಂ.ಎಸ್.ಹೆಡೆ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು.

Edited By : Nagaraj Tulugeri
Kshetra Samachara

Kshetra Samachara

24/06/2022 06:13 pm

Cinque Terre

34.96 K

Cinque Terre

0

ಸಂಬಂಧಿತ ಸುದ್ದಿ