ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗೊಬ್ಬರ ಪಡೆಯಲು ರೈತರು ನಾ ಮುಂದು ತಾ ಮುಂದು-ನಿಲ್ಲದ ವಾಗ್ವಾದ!

ಕುಂದಗೋಳ : ಮುಂಗಾರು ಬಿತ್ತನೆಗೆ ಗೊಬ್ಬರ ಪಡೆಯಲು ಕುಂದಗೋಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎದುರು ಸರದಿಯಲ್ಲಿ ನಿಂತ ರೈತರು ಸಮರ್ಪಕವಾಗಿ ಗೊಬ್ಬರ ನೀಡುವಂತೆ ವಾಗ್ವಾದ ನಡೆಸಿದ ಘಟನೆ ಇಂದು ನಡೆಯಿತು.

ಕುಂದಗೋಳ, ಸಂಶಿ, ಯಲಿವಾಳ, ದೇವನೂರು, ಯರಗುಪ್ಪಿ, ಯರಿನಾರಾಯಣಪೂರ, ಕುಬಿಹಾಳ, ಯರೇಬೂದಿಹಾಳ, ಶಿರೂರು, ರೊಟ್ಟಿಗವಾಡ, ಸೇರಿ ಒಟ್ಟು ತಾಲೂಕಿನಲ್ಲಿ 10 ಸ್ಥಳಗಳಲ್ಲಿ ಗೊಬ್ಬರ ವಿತರಣೆ ಕೌಂಟರ್ ತೆರಲಾಗಿದೆ.

ಆದರೆ ಕುಂದಗೋಳ ಕೇಂದ್ರ ಸ್ಥಾನವಾದ ಕಾರಣ ಅತಿ ಹೆಚ್ಚಿನ ರೈತರು ಗೊಬ್ಬರ ಪಡೆಯಲು ಹಳ್ಳಿಗಳಿಂದ ಇಲ್ಲಿಗೆ ಆಗಮಿಸಿದ್ದು, ವಿತರಣೆ ವೇಳೆ ಸರದಿ ಸಾಲು ಹೊರತುಪಡಿಸಿ ನೇರ ಬಂದವರಿಗೆ ಗೊಬ್ಬರ ಕೊಡದಂತೆ ರೈತರು ಸಂಘದ ಶೆಟ್ಟರ್ ಕ್ಲೋಸ್ ಮಾಡಿ ಆಕ್ರೋಶ ಹೊರಹಾಕಿದರು.

ಪ್ರತಿ ಎಕರೆಗೆ ಡಿಎಪಿ, ಯೂರಿಯಾ ಇತರೆ ಗೊಬ್ಬರ ಸೇರಿ ನಾಲ್ಕು ಚೀಲ ನೀಡುತ್ತಿದ್ದೇವೆ. ಅದಲ್ಲದೆ ಗೊಬ್ಬರದ ಸಂಗ್ರಹದ ಪ್ರಮಾಣವನ್ನು ನೋಟಿಸ್ ಹಾಕಿ ವಿತರಣೆ ಮಾಡುತ್ತಿದ್ದು, ಸರದಿ ಸಾಲಿನಲ್ಲಿ ಬರುವುದು ರೈತರ ಕರ್ತವ್ಯ. ನಾವು ಗಮನಿಸಿದ್ರೇ, ಗೊಬ್ಬರ ವಿತರಣೆ ವಿಳಂಬ ಆಗಲಿದೆ ಎಂದು ಸಂಘದವರು ತಿಳಿಸಿ, ಪುನಃ ಪೊಲೀಸರ್ ನೇತೃತ್ವದಲ್ಲಿ ಸರದಿ ಸಾಲು ಏರ್ಪಡಿಸಿ ಗೊಬ್ಬರ ವಿತರಣೆ ಆರಂಭಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/06/2022 02:40 pm

Cinque Terre

47.24 K

Cinque Terre

0

ಸಂಬಂಧಿತ ಸುದ್ದಿ