ಹುಬ್ಬಳ್ಳಿ : ಮಳೆ ಶುರುವಾಗಿದೆ ಬಿತ್ತನೆಗೆ ಸಿದ್ದತೆ ನಡೆಸುತ್ತಿರುವ ಅನ್ನದಾತರು ರಸಗೊಬ್ಬರಕ್ಕಾಗಿ ಪರದಾಡುವಂತಾಗಿದೆ.
ಹೌದು ಧಾರವಾಡ ಜಿಲ್ಲೆಯ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆ ತಯಾರಾಗುತ್ತಿದ್ದಾರೆ ಇದರ ಮಧ್ಯೆ ರಸಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ.
ಅಲ್ಲಿ ಇಲ್ಲಿ ಸಿಕ್ಕರೂ ದುಪ್ಪಟ್ಟು ಬೆಲೆಗೆ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡಿಎಪಿ ಗೊಬ್ಬರ ಸರ್ಕಾರದಿಂದ ಸಬ್ಸಿಡಿ ಇದೆ ನಿಜ. ಕೆಲ ಅಂಗಡಿ ಮಾಲೀಕರು ಸರ್ಕಾರ ನಿಗದಿ ಮಾಡಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಖರೀದಿಸಿದ ಡಿಎಪಿ 50 ಕೆಜಿ ಚೀಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಿದ ಹಿನ್ನಲೆಯಲ್ಲಿ 1200 ರೂಪಾಯಿಗೆ ರೈತರಿಗೆ ಮಾರಾಟ ಮಾಡಬೇಕು ಎಂದು ಚೀಲದ ಮೇಲೆ ನಮೂದಿಸಿದೆ. ಆದ್ರೆ ಅಂಗಡಿ ಮಾಲಿಕರು 1450 ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಾವ ಗೊಬ್ಬರಕ್ಕೆ ಕಡಿಮೆ ಬೇಡಿಕೆ ಇದೇಯೋ ಅದಕ್ಕೆ ಅಧಿಕೃತ ಬಿಲ್ ಕೊಡಲಾಗುತ್ತೆ. ಆದ್ರೆ ರೈತರ ಬೇಡಿಕೆ ಹೆಚ್ಚಾದರೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಅಧಿಕೃತ ಬಿಲ್ ಬದಲಿಗೆ ಬಿಳಿ ಹಾಳೆಯ ಮೇಲೆ ಬರೆದು ಕೊಡಲಾಗುತ್ತಿದೆ. ಇನ್ನು ಸರಿಯಾದ ಬಿಲ್ ಕೇಳಿದ ರೈತರಿಗೆ ಗೊಬ್ಬರ ಬಂದಿಲ್ಲಾ ಎಂದು ಸತಾಯಿಸುತ್ತಿರುವುದು ಸಾಮಾನ್ಯವಾಗಿದೆ.
ಗೊಬ್ಬರ ಅಂಗಡಿಗಳ ಮುಂದೆ ಮಾಹಿತಿ ಫಲಕ ಕಡ್ಡಾಯವಾಗಿ ಹಾಕಬೇಕು. ಯಾವ ಗೊಬ್ಬರದ ಬೆಲೆ ಎಷ್ಟಿದೆ, ಅಂಗಡಿಗೆ ಬಂದ ಸ್ಟಾಕ್, ಮಾರಾಟ ಹಾಗೂ ಬಾಕಿ ಉಳಿದ ಗೊಬ್ಬರ ಬಗ್ಗೆ ಉಲ್ಲೇಖಿಸಬೇಕಿದೆ.
ಆದ್ರೆ ಯಾವುದೇ ಅಂಗಡಿಗಳಲ್ಲಿ ಈ ದೃಶ್ಯ ಫಲಕ ಕಾಣಸಿಗುತ್ತಿಲ್ಲ. ಅಲ್ಲದೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯ ಕೃಷಿ ಪತ್ತಿನ ಸೊಸೈಟಿಗಳಿಗೆ ಹೆಚ್ಚಿನ ಸರಬರಾಜು ಮಾಡಿದರೆ ಅಲ್ಲಿ ಯಾವುದೇ ಅನ್ಯಾಯವಾಗುವುದಿಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ.
Kshetra Samachara
10/05/2022 08:35 pm