ಕುಂದಗೋಳ: ಇ-ಸ್ವತ್ತು ಉತಾರ ನೀಡದೆ ಅಲ್ಲಿ ಬಾ, ಇಲ್ಲಿ ಬಾ ಎಂದು ಸತಾಯಿಸಿ ದಿನ ಕಳೆಯುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ನನ್ನು ಗ್ರಾಮಸ್ಥರು ನಡುರಸ್ತೆಯಲ್ಲೇ ಅಡ್ಡಗಟ್ಟಿದ ಘಟನೆ ಕುಂದಗೋಳದಲ್ಲಿ ನಡೆದಿದೆ.
ದೇವನೂರು ಗ್ರಾಮ ಪಂಚಾಯತಿ ಪಿಡಿಓ ಅವರು ರೈತ ರಾಯಪ್ಪ ಬಟ್ಟೂರ ಅವರಿಗೆ ಇ-ಸ್ವತ್ತು ಉತಾರ ನೀಡಲು ಮೊದಲು ಪಂಚಾಯ್ತಿಗೆ, ಆಮೇಲೆ ಕುಂದಗೋಳಕ್ಕೆ ಬರಲು ಹೇಳಿದ್ದರು. ಇದರಿಂದ ಕೋಪಗೊಂಡ ರಾಯಪ್ಪ ನಡು ರಸ್ತೆಯಲ್ಲೇ ಪಿಡಿಓ ಅವರನ್ನು ತಡೆದು ಅಸಮಾಧಾನ ಹೊರ ಹಾಕಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಯಿತು.
ಈ ಘಟನೆ ಬಳಿಕ ದೇವನೂರು ಗ್ರಾಮಸ್ಥರು ಪಿಡಿಓ ವಿರುದ್ಧ ಅವ್ಯವಹಾರ ಹಾಗೂ ಲಂಚ ಆರೋಪ ಮಾಡಿದ್ದಾರೆ. ಲಂಚ ಪಡೆದರೂ ಕೆಲಸ ಮಾಡಿ ಕೊಟ್ಟಿಲ್ಲ, ಪಂಚಾಯ್ತಿಗೆ ಬರಲ್ಲಾ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಆರೋಪಿಸಿದ್ದಾರೆ.
ಒಟ್ಟಾರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ದೇವನೂರು ಪಿಡಿಓ ಕಥೆ ಏನು? ಯಾವುದು ಸತ್ಯಾಂಶ? ನೀವೇ ಸಾರ್ವಜನಿಕರಿಗೆ ತಿಳಿಸಿ ಅವರ ಸರ್ಕಾರಿ ಕೆಲಸ ಮಾಡಿ ಕೊಡಬೇಕಿದೆ.
Kshetra Samachara
14/03/2022 09:48 pm