ನವಲಗುಂದ: ಪಟ್ಟಣದ ಬಾಲೋಧ್ಯಾನದ ಹತ್ತಿರವಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ 2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ FAQ ಗುಣಮಟ್ಟದ ಪ್ರತಿ ಕ್ವಿಂಟಾಲ್‌ಗೆ 5230 ರೂ.ನಂತೆ ಕಡಲೆ ಕಾಳು ಖರೀದಿಸಲು, ಕಡಲೆ ಕಾಳು ಖರೀದಿ ಕೇಂದ್ರವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ಯಲ್ಲಪ್ಪ ಅಕ್ಕಿ, ನವಲಗುಂದ ತಾಲೂಕಾ ಬಿಜೆಪಿ ಅಧ್ಯಕ್ಷರಾದ ಎಸ್.ಬಿ ದಾನಪ್ಪಗೌಡರ, ನವಲಗುಂದ ನಗರ ಘಟಕ ಬಿಜೆಪಿ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಮುಖಂಡರಾದ ಎ.ಎಮ್ ಮನಮಿ, ಬಾಪುಗೌಡ ಪಾಟೀಲ, ರೈತರು, ರೈತ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
27/02/2022 08:31 pm