ಕುಂದಗೋಳ : ರೈತರಿಗೆ ಬೀಜ ಗೊಬ್ಬರ ವಿತರಣೆ ಜೊತೆ ರೈತರ ಜಮೀನಿನ ಪರೀಕ್ಷೆ ಹಾಗೂ ಸರ್ಕಾರದ ಕಿಸಾನ್ ಸಮ್ಮಾನ್, ಮುಖ್ಯಮಂತ್ರಿ ರೈತ ವಿಧ್ಯಾನಿಧಿ ಯೋಜನೆ ಹೀಗೆ ಹಲವಾರು ಕಾರ್ಯ ಮಾಡಬೇಕಿದ್ದ ಸಂಶಿ ರೈತ ಸಂಪರ್ಕ ಕೇಂದ್ರ ಸಿಬ್ಬಂದಿ ಕೊರತೆಯಿಂದ ದೂರ ಉಳಿದಿದೆ.
ಸಂಶಿ ಹೋಬಳಿ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿ 26 ಹಳ್ಳಿ ರೈತರ ಕೃಷಿ ಬೆಳೆ ಸಮಸ್ಯೆ ಜೊತೆ ರೈತರಿಗೆ ಅಗತ್ಯ ಸೇವೆ ಸಹಕಾರ ನಿಡಬೇಕಾದ ಸಂಶಿ ರೈತ ಸಂಪರ್ಕ ಕೇಂದ್ರದಲ್ಲಿ ಎರೆಡು ಜನ ಕೃಷಿ ಅಧಿಕಾರಿಗಳ ಪೈಕಿ ಒಬ್ಬರು ಮಾತ್ರ ಕರ್ತವ್ಯದಲ್ಲಿದ್ರೇ, ಐವರು ಸಹಾಯಕ ಕೃಷಿ ಅಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಒಟ್ಟು ಒಬ್ಬ ಕೃಷಿ ಅಧಿಕಾರಿ ನಾಲ್ಕು ಜನ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಸಂಶಿ ರೈತ ಸಂಪರ್ಕ ಕೇಂದ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಖಾಲಿ ಇವೆ.
ಈ ಪರಿಣಾಮ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಸಲಹೆ ನೀಡೋದು,ಕೃಷಿ ಬೆಳೆಗೆ ಅಂಟಿದ ರೋಗಕ್ಕೆ ಪರಿಹಾರ ನೀಡುವುದು, ಮಣ್ಣು ಪರೀಕ್ಷೆ, ಬೀಜ ಗೊಬ್ಬರ ವಿತರಣೆ ಜೊತೆ ಹೊಸ ಯೋಜನೆ ಮುಖ್ಯಮಂತ್ರಿ ರೈತ ವಿಧ್ಯಾನಿಧಿ ಯೋಜನೆ ತಿಳುವಳಿಕೆಗೂ ಸಹ ತೀವ್ರ ಹಿನ್ನಡೆ ಉಂಟಾಗಿದೆ.
ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಅನ್ನದಾತನ ಇಲಾಖೆಯನ್ನು ಸುಭದ್ರ ಮಾಡಬೇಕಿದೆ.
Kshetra Samachara
26/11/2021 02:15 pm