ಕುಂದಗೋಳ : ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕುಂದಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಮಾಡಿ ಮಾರುಕಟ್ಟೆಗೆ ಕಳುಹಿಸಿದ 240 ಕ್ವಿಂಟಾಲ್ 480 ಪಾಕೆಟ್ ಹೆಸರು ಗುಣಮಟ್ಟದ ಕೊರತೆಯಿಂದಾಗಿ ಮರಳಿ ರೈತರ ಲೆಕ್ಕಕ್ಕೆ ಕುಂದಗೋಳ ಎಪಿಎಂಸಿಗೆ ಬಂದು ತಲುಪಿದೆ. ಈ ಕಾರಣ ಆಕ್ರೋಶಗೊಂಡ ರೈತರು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ.
ಹೌದು ! ಕುಂದಗೋಳದಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭವಾದ ಬಳಿಕ 780 ಪಾಕೆಟ್ ಹೆಸರು ಸರ್ಕಾರಕ್ಕೆ ಖರೀದಿಯಾಗಿದ್ದು, ಈಗ ಹೆಸರು ಕಾಳು ಚಿಕ್ಕದಾಗಿದೆ ಗುಣಮಟ್ಟ ಸರಿ ಇಲ್ಲವೇಂದು 480 ಪಾಕೆಟ್ ಹೆಸರು ಮರಳಿ ರೈತರ ಹೆಸರಲ್ಲಿ ಎಪಿಎಂಸಿಯಲ್ಲಿ ಮೂಟೆಗಟ್ಟಲೇ ಬಿದ್ದಿದ್ದು ರೈತರು ಒಮ್ಮೆ ಮಾರಿದ ಹೆಸರ ಬೆಳೆಯನ್ನು ಏನು ಮಾಡ್ಬೇಕು ? ಎಂಬ ಚಿಂತೆಯಲ್ಲಿದ್ದಾರೆ.
7275 ರೂಪಾಯಿ ಬೆಂಬಲ ಬೆಲೆಗೆ 12 ಪ್ರತಿಶತ ತೇವಾಂಶಕ್ಕಿಂತ ಕಡಿಮೆ ಇದ್ದ ಹೆಸರನ್ನು ಅಧಿಕಾರಿಗಳು ಅಂದೇ ಪರೀಕ್ಷೆ ನಡೆಸಿ ಖರೀದಿ ಮಾಡಿ, ಈಗ ಹೊಸ ರಾಗ ಮಾಡುತ್ತಿರುವುದು, ಹೆಸರು ಮಾರಿದ ಹಾಗೂ ಈಗಾಗಲೇ ಮಾರಾಟ ಮಾಡಲು ಸಿದ್ಧರಾದ ಎಲ್ಲ ರೈತರಿಗೂ ತಲೆ ನೋವಾಗಿದ್ದು ರೈತರು ಸರ್ಕಾರ ನೂರೆಂಟು ತರಹದ ನಿಯಮ ಮಾಡಿ ರೈತರ ಹೊಟ್ಟೆಗೆ ಬರೆ ಕೊಡಬಾರ್ದು ಎನ್ನುತ್ತಿದ್ದಾರೆ.
ಈ ಹಿಂದೆ ಗ್ರೇಡರ್ ಅಧಿಕಾರಿ ಇಲ್ಲದೆ 5 ದಿನ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ಈಗ ಹವಾಮಾನ ಬದಲಾದ ದಿನದಲ್ಲಿ ಎಲ್ಲಿಂದ ಇವರಿಗೆ ಗುಣಮಟ್ಟದ ಹೆಸರು ತರೋದು ? ನಾವು ಮನೆಯಲ್ಲಿ ಹೆಸರು ತಯಾರಿ ಮಾಡ್ತಿವಾ ? ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರ ಹಾಗೂ ಅಧಿಕಾರಿಗಳು ನೂರೆಂಟು ನಿಯಮ ಮಾಡಿ ರೈತರಿಂದ ಹೆಸರು ಖರೀದಿಸಿ ಈಗ ಆಡೋಣ ಬಾ ಕೆಡಿಸೋಣ ಬಾ ಎಂಬ ಆಟಕ್ಕೆ ಉತ್ತರ ಏನಿದೆ ಎಂಬುದು ರೈತರ ಅಳಲು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
25/10/2021 04:39 pm