ನವಲಗುಂದ: ಪಟ್ಟಣದ ರೈತ ಸಂಪರ್ಕ ಉಪಕೇಂದ್ರದಲ್ಲಿ ರೈತರಿಗೆ ಕಡಲೆ ಬೀಜವನ್ನು ವಿತರಿಸಲಾಗುತ್ತಿದೆ. ರೈತರಿಗೆ ಇಲ್ಲಿ ಮೂಲಭೂತ ಸೌಕರ್ಯಗಳಂತು ಇಲ್ಲ. ಆದರೆ ಮಳೆಯಿಂದ ಬಚಾವ್ ಆಗಲು ಏನಾದರೂ ವ್ಯವಸ್ಥೆಯನ್ನ ಮಾಡಬಹುದಿತ್ತು.
ಹೌದು. ಮೊದಲೇ ಮಳೆಯಿಂದ ಇಲ್ಲಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈಗ ಇಲ್ಲಿ ಮಳೆಯಲ್ಲೇ ರೈತರು ನಿಂತು ಕಡಲೆ ಖರೀದಿಸುತ್ತಿದ್ದಾರೆ. ಮಳೆಯಿಂದಾಗಿ ಸಂಪೂರ್ಣ ಆವರಣ ಕೇಸರಿನಿಂದ ಕೂಡಿತ್ತು. ಈಗ ಮಳೆಯ ನಡುವೆಯೇ ಕೆಸರಿನಲ್ಲಿ ನಿಂತು ಬೀಜ ಖರೀದಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ, ರೈತರ ಸಮಸ್ಯೆ ದೂರ ಮಾಡಬೇಕಿದೆ.
Kshetra Samachara
11/10/2021 08:55 pm