ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಾರತಮ್ಯ ಮಾಡದೇ ರೈತರಿಗೆ ಪರಿಹಾರ ನೀಡಬೇಕು; ಕೋನರಡ್ಡಿ

ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ, ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಸಾಕಷ್ಟು ಮಳೆಯಾಗಿ ಬೆಳೆ ಹಾನಿಯಾಗಿದೆ. ಕೇಂದ್ರ ಅಧ್ಯಯನ ತಂಡ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪರಿಹಾರವನ್ನು ನೀಡುತ್ತಿದ್ದಾರೆ ಅದು ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ನವಲಗುಂದ ಪಟ್ಟಣದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರ ಕಚೇರಿಯಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿ, ಕೆಲವು ರೈತರಿಗೆ ಎಕರೆಗೆ ಹದಿಮೂರು ಸಾವಿರದ ಆರನೂರು ಹಾಗೂ ಇನ್ನು ಕೆಲವು ರೈತರಿಗೆ ಇಪ್ಪತ್ತೆಳು ಸಾವಿರ ನೀಡುವ ಮೂಲಕ ಪರಿಹಾರದಲ್ಲಿ ತಾರತಮ್ಯ ಆಗಿದೆ. ಕೆಲವು ರೈತರಿಗೆ ಕೊಟ್ಟಿದ್ದಾರೆ ಇನ್ನು ಕೆಲವರಿಗೆ ಕೊಟ್ಟಿಲ್ಲ. ಇದರಿಂದ ಗೊಂದಲದಲ್ಲಿ ಸಿಲುಕುವಂತಾಗಿದೆ.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ಎಲ್ಲಾ ರೈತರಿಗೂ ಪರಿಹಾರ ಕೊಡಲು ಮುಂದಾಗಬೇಕು. ಈ ತಾರತಮ್ಯ ಹೋಗಲಾಡಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಹಣ ತುಂಬಾ ಕಡಿಮೆ ನೀಡುತ್ತಿದೆ. ಸರಿಯಾಗಿ ಯಾವುದೇ ತಾರತಮ್ಯ ಇಲ್ಲದೆ ಪರಿಹಾರ ನೀಡಬೇಕು ಇಲ್ಲದೆ ಇದ್ದಲ್ಲಿ ಪ್ರತಿಭಟನೆ ಹಾದಿಯನ್ನು ಮುಂದುವೆರೆಸಬೇಕಾಗುತ್ತದೆ ಎಂದರು.

Edited By : PublicNext Desk
Kshetra Samachara

Kshetra Samachara

26/09/2022 09:39 pm

Cinque Terre

22.17 K

Cinque Terre

1

ಸಂಬಂಧಿತ ಸುದ್ದಿ