ಹುಬ್ಬಳ್ಳಿ: ಸಾರ್ಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಬಸ್ಸುಗಳ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಚಾಲಕರಿಗೆ ನಿಯಮಿತವಾಗಿ ತರಬೇತಿ ನೀಡಲಾಗುತ್ತದೆ. ಅಪಘಾತ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿನೀಡಿ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿ ಅಗತ್ಯ ಕ್ರಮ ವಹಿಸುತ್ತಾರೆ. ಇದರಿಂದಾಗಿ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ.
2018-19ರಲ್ಲಿ 14 ಮರಣಾಂತಿಕ, 12 ಗಂಭೀರ ಹಾಗೂ 31 ಸಣ್ಣ ಪುಟ್ಟ ಅಪಘಾತಗಳು ಸೇರಿದಂತೆ ಒಟ್ಟು 57 ಅಪಘಾತಗಳು ಸಂಭವಿಸಿದ್ದವು. 2019-20 ರಲ್ಲಿ 17 ಮರಣಾಂತಿಕ,8 ಗಂಭೀರ ಹಾಗೂ27 ಸಣ್ಣ ಪುಟ್ಟ ಅಪಘಾತಗಳು ಸೇರಿದಂತೆ ಒಟ್ಟು 52 ಅಪಘಾತಗಳು ಸಂಭವಿಸಿದ್ದವು.
2020-21 ರಲ್ಲಿ ಏಪ್ರಿಲ್ ನಿಂದ ಸಪ್ಟೆಂಬರ್ ಅಂತ್ಯದ ವರೆಗೆ ಕೇವಲ 1 ಮರಣಾಂತಿಕ ಹಾಗೂ 4 ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುತ್ತವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
Kshetra Samachara
29/10/2020 11:32 am