ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜುಲೈ 3 ಕ್ಕೆ ನೃತ್ಯ ಮನೋಹರಿ ಭರತನಾಟ್ಯ ನೃತ್ಯ ಕಾರ್ಯಕ್ರಮ ಆಯೋಜನೆ

ಹುಬ್ಬಳ್ಳಿ: ಶಿವಶಕ್ತಿ ಕಲಾ ಕೇಂದ್ರ ಹಾಗೂ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೃತ್ಯ ಮನೋಹರಿ ಕಾರ್ಯಕ್ರಮವನ್ನು ಇದೇ ತಿಂಗಳು ಜುಲೈ 3 ರಂದು ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶವಶಕ್ತಿ ಕಲಾ ಕೇಂದ್ರದ ಕಾರ್ಯದರ್ಶಿ ಪ್ರೇರಣಾ ಶಿಂಧೆ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಶಿವಶಕ್ತಿ ಕಲಾ ಕೇಂದ್ರ ಸಂಸ್ಥೆ 40 ವರ್ಷಗಳಿಂದ ನಿರಂತರವಾಗಿ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ, ಭಕ್ತಿ ನೃತ್ಯ ಹೀಗೆ ವಿವಿಧ ನೃತ್ಯಗಳನ್ನು ಕಲಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 3 ರಂದು ಭರತ ನಾಟ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಸಿಎಮ್ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ರಂಗಭೂಮಿ ಕಲಾವಿದ ಯಶವಂತ ದೇಶಪಾಂಡೆ, ಜೂನಿಯರ್ ರಾಜಕುಮಾರ ಅಶೋಕ್ ಬಸ್ತಿ, ಕೆ.ಎಲ್.ಇ ವಿದ್ಯಾಸಂಸ್ಥೆ ಕಾಲೇಜು ಲಿಂಗರಾಜ ಮುಳ್ಳೂಳ್ಳಿ, ವಿನಾಯಕ ಕೊನೆರಿ, ಗಾಯಕ ಆನಂದ ಕುಲಕರ್ಣಿ, ಮಹಾಂತೇಶ್ ರೋಣದ ಡಾಲ್ಫೀನ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

Edited By :
Kshetra Samachara

Kshetra Samachara

30/06/2022 04:13 pm

Cinque Terre

14.97 K

Cinque Terre

0