ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಲಾಸಕ್ತರಿಗಾಗಿ ರಂಗ ತರಬೇತಿ ಶಿಬಿರ, 27 ರಂದು ಉದ್ಘಾಟನೆ

ಹುಬ್ಬಳ್ಳಿ :ನಗರದ ಸುನಿಧಿ ಕಲಾ ಸೌರಭ ಸಂಸ್ಥೆಯು ಜೂನ್ 27 ರಿಂದ ಒಂದು ತಿಂಗಳ ಕಾಲ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ.

27 ರಂದು ಸೋಮವಾರ ಸಂಜೆ 6:30ಕ್ಕೆ ,ಹುಬ್ಬಳ್ಳಿಯ ದೇವಾಂಗ ಪೇಟ್ ರಸ್ತೆಯ ರಾಜಾಜಿನಗರ ದಲ್ಲಿರುವ ಚೈತನ್ಯ ಧಾಮದಲ್ಲಿ ಈ ಶಿಬಿರ ಪ್ರಾರಂಭ ಗೊಳ್ಳಲಿದೆ.

ಡಾ : ಶಶಿಧರ ನರೇಂದ್ರ ಈ ಅಭಿನಯ ಶಿಬಿರ ಉದ್ಘಾಟಿಸಲಿದ್ದು ,ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಡಾ:ಲಿಂಗರಾಜ ಅಂಗಡಿ ಕಸಾಪ ಅಧ್ಯಕ್ಷರು ಧಾರವಾಡ ಜಿಲ್ಲೆ, ಹಾಗೂ ಮಾಜಿ ಸಂಸದ ಪ್ರೊ ಐ ಜಿ ಸನದಿ ಆಗಮಿಸಲಿದ್ದಾರೆ.

ಈ ರಂಗ ತರಬೇತಿ ಶಿಬಿರದಲ್ಲಿ ಚಲನಚಿತ್ರ, ಧಾರಾವಾಹಿ ಹಾಗೂ ನಾಟಕಗಳಲ್ಲಿ ಅಭಿನಯಿಸಲು ಸಹಾಯಕ ವಾಗುವಂತೆ ರಂಗ ತರಬೇತಿ ನೀಡಲಾಗುವುದು.

ಪ್ರತಿ ದಿನ ಸಂಜೆ 6ಗಂಟೆ ಯಿಂದ ತರಬೇತಿ ನಡೆಯಲಿದ್ದು ಈ ಶಿಬಿರದಲ್ಲಿ ಅಭಿನಯ, ನಿರ್ದೇಶನ,ಮೂಕಾಭಿನಯ,ರಂಗ ಸಜ್ಜಿಕೆ, ರಂಗ ಇತಿಹಾಸ, ಸಂಗೀತ, ಮೇಕಪ್,ಮುಖವಾಡ ತಯಾರಿಕೆ, ಬೆಳಕಿನ ಸಂಯೋಜನೆ ಮತ್ತು ರಂಗ ಭೂಮಿಗೆ ಸಂಬಂಧಿಸಿದ ಇತರೆ ವಿಷಯಗಳಕುರಿತಂತೆ ನುರಿತ ರಂಗ ನಿರ್ದೇಶಕರುಗಳಿಂದ ತರಬೇತಿಯನ್ನು ನೀಡಲಾಗುವುದು.

ಆಸಕ್ತರು ತಮ್ಮಗಳ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ಕಾರ್ಯದರ್ಶಿ ವೀಣಾ ಆಠವಲೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

26/06/2022 10:02 am

Cinque Terre

13.25 K

Cinque Terre

1

ಸಂಬಂಧಿತ ಸುದ್ದಿ