ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಿಣಿರಾಮನ ಮೂಲಕ ಜನಮನ ಗೆದ್ದ ಉತ್ತರ ಕರ್ನಾಟಕದ ಕಿರುತೆರೆ ನಟ ರಿತ್ವಿಕ್ ಮಠದ

ಹುಬ್ಬಳ್ಳಿ: ಆತ ಉತ್ತರ ಕರ್ನಾಟಕದ ಕಲಾವಿದ ಈಗ ತನ್ನಲ್ಲಿರುವ ಅದ್ಬುತ ಕಲೆಯ ಮೂಲಕ ಉತ್ತರ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಹೌದು. ಕಿರುತೆರೆ ನಾಯಕ ನಟ ರತ್ವಿಕ್ ಮಠದ ಹುಟ್ಟಿದ್ದು ದಾವಣಗೇರಿ ಜಿಲ್ಲೆಯ ದೊಡ್ಡಬಿಗರೆ ಗ್ರಾಮದಲ್ಲಿ. ಬೆಳದಿದ್ದು ಬೆಳಗಾವಿ ಜಿಲ್ಲಿಯಲ್ಲಿ, ಬಿ.ಎಸ್.ಸಿ ಆನಿಮೇಷನ್ ಮುಗಿಸಿ ಉದ್ಯೊಗ ಅರಿಸಿ ಬೆಂಗಳೂರಿಗೆ ಬಂದು ಕಾರ್ಪೋರೇಟ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದರೂ ತೃಪ್ತಿ ಇರಲಿಲ್ಲ. ಚಿತ್ರ ರಂಗದ ಕಡೆ ಮನಸ್ಸು ಇದ್ದಿದ್ದರಿಂದ ಮನೆಯಲ್ಲಿ ಹೇಳಿದರೆ ಒಪ್ಪುವುದಿಲ್ಲವೆಂದು ಸುಳ್ಳು ಹೇಳಿ ಬಂದಿದ್ದ ರಿತ್ವಿಕ್ ಮಠದ ಅವರು ತಡವಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ.

ಆದರೆ, ಬಣ್ಣದ ಲೋಕ ಅಷ್ಟು ಸುಲಭ ಅಲ್ಲ ಎಂದು ಅವರಿಗೆ ಆಗಲೇ ಗೊತ್ತಾಗಿತ್ತು. ಅವಕಾಶ ಕೊಟ್ಟವರಿಗಿಂತ ಕಾಲೇಳೇದವರೇ ಹೆಚ್ಚು. ಹಲವು ದಿನಗಳ ಕಾಲ ಅಲೇದು ನಂತರ ಅವಮಾನಗಳನ್ನು ನುಂಗಿ ಅವಕಾಶ ಪಡೆದರು. ಮೊಟ್ಟ ಮೊದಲ ಬಾರಿಗೆ ಯುವ ಸಾಮ್ರಾಟ್ ಎಂಬ ಚಿತ್ರದಲ್ಲಿ ಸೈಡ್ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ನಂತರ ಜಸ್ಟ್ ಲವ್ ಚಿತ್ರದಲ್ಲಿ ಅಭಿನಯಿಸಿದರು.

ಇನ್ನು ರಾಜಗುರು ಹೊಸಕೊಟೆಯವರ ರಂಗಾಯಣ ತಂಡದಲ್ಲಿ ಸೇರಿಕೊಂಡು 'ಒಂದಾನೊಂದು ಕಾಲದಲ್ಲಿ' ಎಂಬ ನಾಟಕದಲ್ಲಿ ಶಂಕರನಾಗರವರ ಮುಖ್ಯ ಪಾತ್ರದಾರಿಯ ಪಾತ್ರದಲ್ಲಿ ಕಾಣಿಸಿಕೊಂಡು, ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾದರು. ಆನಂತರ, ತೆಲಗು ಹಾರರ್ ಮೂವಿ ಪ್ರೇಮಕೊ ಓಕ್ ಕೌಗಿಲೇ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರೂಪ ಎಂಬ ಧಾರಾವಾಹಿಯಲ್ಲಿ ಶ್ಯಾಮ್ ಪಾತ್ರದ ಮೂಲಕ ಜನರ ಮನ ಮಾನಸಗಳನ್ನು ಆವರಿಸಿದರು. ಮುಂದೆ ಸಾಗುತ್ತಾ ಚಿತ್ರರಂಗದಲ್ಲಿ ಪಯಣಿಸುತ್ತಾ -ಗಿಫ್ಟ್ ಬಾಕ್ಸ್, ಆ ಎರಡು ವರ್ಷಗಳು, ಉತ್ಸವ ಎಂಬ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

ಕಳೆದ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ರಿತ್ವಿಕ್ ಮಠದ ದಂಪತಿಯು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕದ ಜನಪ್ರಿಯ 'ಗಿಣಿರಾಮ' ಎಂಬ ಧಾರವಾಹಿಯಲ್ಲಿ ಶಿವರಾಮ ಎಂಬ ರಗಡ ಪಾತ್ರದಲ್ಲಿ ಅಭಿನಯಿಸಿ ಮನೆ ಮನೆ ಮಾತಾಗಿ ಯುವಕರ ಮತ್ತು ಯುವತಿಯರ ಅಲ್ಲದೇ ಮನೆ ಹಿರಿಯ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
Kshetra Samachara

Kshetra Samachara

11/06/2022 08:58 am

Cinque Terre

17.3 K

Cinque Terre

6

ಸಂಬಂಧಿತ ಸುದ್ದಿ