ಹುಬ್ಬಳ್ಳಿ : ನಗರದ ಸುನಿಧಿ ಕಲಾಸೌರಭ ಸಂಸ್ಥೆಯು " ಅಭಿನಯ - ಅಭಿವ್ಯಕ್ತಿ '' ಎಂಬ ಕಾರ್ಯಕ್ರಮದ ಮೂಲಕ ಇದೇ ದಿ. 23 ರಿಂದ ಎರಡು ದಿನಗಳ ಕಾಲ ಮಕ್ಕಳಿಗಾಗಿ ಅಭಿನಯ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಸ್ಥಳ, ಬಿಡ್ನಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್.
ಸುಮಾರು 60 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಅಭಿನಯ ಕಲಾ ತರಬೇತಿ ಪಡೆಯಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಕಾರ್ಯಾಗಾರ ಉದ್ಘಾಟಿಸಲಿದ್ದು ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್ ಶಿವಳ್ಳಿಮಠ ಇತರರು ಅತಿಥಿಗಳಾಗಿ ಉಪಸ್ಥಿತರಿರುವರು. ಶ್ರೀಮತಿ ವೀಣಾ ಅಠವಲೆ ಕಾರ್ಯಾಗಾರದ ಸಂಚಾಲಕರಾಗಿದ್ದು, ಸಿಕಂದರ್ ದಂಡಿನ್ ನಿರ್ವಾಕರಾಗಿದ್ದಾರೆ
ದಿ.24 ರಂದು ಸಮಾರೋಪ ನಡೆಯಲಿದ್ದು ಶಶಿಧರ ನರೇಂದ್ರ ಮುಖ್ಯ ಅತಿಥಿಯಾಗಿದ್ದಾರೆ.
Kshetra Samachara
22/12/2021 10:35 am