ಹುಬ್ಬಳ್ಳಿ: ಆರ್.ಕೆ ಟೈಗರ್ಸ್ ಆಯೋಜಿಸಿದ್ದ ಉಣಕಲ್ ಪ್ರೀಮಿಯರ್ ಲೀಗ್ (UPL)ಕ್ರಿಕೆಟ್ ಟೂರ್ನಾಮೆಂಟ್ ಸಮಾರೋಪಗೊಂಡಿದೆ. ಸುಮಾರು 8 ತಂಡಗಳು ಈ ಸಲದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿವೆ. ರವಿವಾರ ಸಂಜೆ ಅಂತಿಮ ಹಣಾಹಣಿ ನಡೆದಿದ್ದು ಆರ್‌ಸಿ ಸೂಪರ್ ಸ್ಟಾರ್ ತಂಡವು ಪಿಎಸ್ ರಾಯಲ್ ಚಾಲೆಂಜರ್ಸ್ ತಂಡವನ್ನು ಮಣಿಸಿ UPL ಟ್ರೋಫಿಯನ್ನು ತನ್ನಾದಾಗಿಸಿಕೊಂಡಿದೆ.
ಇನ್ನು ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ಸತೀಶ್ ಜಾರಕಿಹೊಳಿ ಆಗಮಿಸಿದ್ದರು. ವಿಜೇತ ತಂಡಕ್ಕೆ ಟ್ರೋಫಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ಕ್ರಿಕೆಟ್ ಎಂಬುದು ವಿಶ್ವವ್ಯಾಪಿ ಕ್ರೀಡೆ. ನಗರ ಪ್ರದೇಶ ಸೇರಿ ಗ್ರಾಮೀಣ ಭಾಗದಲ್ಲೂ ಕೂಡ ಯುವಜನರು ಸ್ವಯಂಪ್ರೇರಿತವಾಗಿ ತಂಡಗಳನ್ನು ರಚಿಸಿಕೊಂಡು ಕ್ರಿಕೆಟ್ ಆಡುತ್ತಾರೆ. ಇದರಲ್ಲಿ ಸೋಲು-ಗೆಲುವಿಗಿಂತ ಎಲ್ಲರ ಸಹಭಾಗಿತ್ವ ಮುಖ್ಯ ಎಂದರು.
ಇನ್ನು ಆರ್.ಕೆ ಟೈಗರ್ಸ್ ತಂಡದ ಕಿರಣ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ...
ಕಾರ್ಯಕ್ರಮದಲ್ಲಿ, ಪಂದ್ಯ ಶ್ರೇಷ್ಟ, ಸರಣಿ ಶ್ರೇಷ್ಟ, ಉತ್ತಮ ವಿಕೆಟ್ ಕೀಪರ್, ಸೇರಿದಂತೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟೂರ್ನಿಯ ಆಯೋಜಕ ಸಂಸ್ಥೆ ಆರ್.ಕೆ ಟೈಗರ್ಸ್‌ನ ಕ್ಯಾಪ್ಟನ್ ರಮೇಶ್ ಕಾಂಬಳೆ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Kshetra Samachara
07/02/2022 08:12 pm