ಸಾಹಸಮಯ ಬಾಕ್ಸಿಂಗ್ ಸ್ಪರ್ಧೆಯು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಜೀವದ ಹಂಗು ತೊರೆದು ಆಡುವ ಈ ಆಟಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರೋತ್ಸಾಹ ಇಲ್ಲದಿದ್ದರೂ ಇಂತಹ ಸ್ಪರ್ಧೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾರ್ಥಿಗಳು ಸಾಧನೆ ಮಾಡಿ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹೌದು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ - ೨೦೨೨ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಮೇಚರ್ ಬಾಕ್ಸಿಂಗ್ ಅಸೋಸಿಯೇಷನ್ ಕ್ಲಾಸಿನ ವಿದ್ಯಾರ್ಥಿಗಳು 3 ಬೆಳ್ಳಿ ಪದಕ ಗೆದ್ದು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕೋಚ್ ಯೋಗೇಶ್ ಸಾಲಿಯಾನ್ ಮಾರ್ಗದರ್ಶನದಲ್ಲಿ ಪುನಮ್ ಜೈನ, ಜಿಯಾ ಮೆಹಥಾ, ಕಾಶೀಶ್ ಜೈನ್ ಹುಬ್ಬಳ್ಳಿ ಧಾರವಾಡಕ್ಕೆ 3 ಸಿಲ್ವರ್ ಮೇಡಲ್ ಪಡೆಯುವಂತೆ ಮಾಡಿದ್ದು, ಮತ್ತಷ್ಟು ಪ್ರೋತ್ಸಾಹ ಸಿಕ್ಕರೆ ದಾಖಲೆ ಮಾಡುವ ಭರವಸೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ.
ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಬಾಕ್ಸಿಂಗ್ ಗೆ ಹೆಚ್ಚು ಪ್ರೋತ್ಸಾಹವಿಲ್ಲ ಕ್ರೀಡಾ ಆಸಕ್ತಿ ಹೊಂದಿರುವವರು ಹಾಗೂ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಿದರೆ ಮುಂದಿನ ದಿನದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಸಿದ್ದಪಡಿಸಬಹುದು ಎಂದು ಕೋಚ್ ಆಗಿರುವ ಯೋಗೇಶ್ ಸಾಲಿಯಾನ್ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/04/2022 12:41 pm