ಹುಬ್ಬಳ್ಳಿ: ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ ಎಂಬುವಂತ ಮಾತು ಅಕ್ಷರಶಃ ಸತ್ಯ. ಹಾಗೇ ಇಲ್ಲೊಬ್ಬ ಬಾಲಕ ಕಲೆಯನ್ನು ಕರಗತ ಮಾಡಿಕೊಂಡು ಹುಬ್ಬಳ್ಳಿಯ ಕೀರ್ತಿಯನ್ನು ದೇಶಾದ್ಯಂತ ಪಸರಿಸುವಂತೆ ಮಾಡಿದ್ದಾನೆ.
ಹೌದು..ಹೀಗೆ ಖಾಸಗಿ ವಾಹಿನಿಯ ಡ್ರಾಮಾ ಜೂನಿಯರ್ಸ್ ನಲ್ಲಿ ರಾರಾಜಿಸುತ್ತ ಡೈಲಾಗ್ ಹೊಡೆಯುತ್ತಿರುವ ಈತ ಸಿದ್ಧಾರ್ಥಗೌಡ ಪಾಟೀಲ. ಹುಬ್ಬಳ್ಳಿಯ ತಬೀಬ್ ಲ್ಯಾಂಡ್ ನಿವಾಸಿ ಗಿರೀಶಗೌಡ ಹಾಗೂ ಶಿವಲೀಲಾ ದಂಪತಿಗಳ ಪುತ್ರ. ಹುಬ್ಬಳ್ಳಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಎಂ.ಆರ್.ಸಾಕ್ರೆ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾನೆ. ಈತ ಒಂದನೇ ತರಗತಿಯಲ್ಲಿ ಓದುತ್ತಿದ್ದಾಗಲೇ 450ಕ್ಕೂ ಹೆಚ್ಚು ಕಂಪನಿಯ ಲೋಗೋ, ಧಾರ್ಮಿಕ ಚಿಹ್ನೆ ಹಾಗೂ ರಾಷ್ಟ್ರೀಯ ಪುರಸ್ಕಾರಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ. ಅಲ್ಲದೇ ದೇಶದ ಎಲ್ಲ ರಾಜ್ಯ ಹಾಗೂ ರಾಜಧಾನಿ ಜೊತೆಗೆ ಆಕರ್ಷಣೆಗಳನ್ನು ಹೇಳುತ್ತಾನೆ. ಇನ್ನೂ ವಿಶೇಷ ಅಂದ್ರೆ ರಂಗವೇದಿಕೆಯ ಮೇಲೆ ಯಾವುದೇ ಪಾತ್ರವನ್ನು ಕೊಟ್ಟರೂ ಕೂಡ ಸರಾಗವಾಗಿ ನಿಭಾಯಿಸುವ ಚತುರ ಕಲಾವಿದ ಈತ.
ಈತನ ಜ್ಞಾನಕ್ಕೆ ಈಗಾಗಲೇ ಯುನಿವರ್ಸಲ್ ತಮಿಳು ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ. ಜೊತೆಗೆ ಟೈಕಾನ್ ನಲ್ಲಿ ಕರ್ನಾಟಕ ಗಾಟ್ ಟ್ಯಾಲೆಂಟ್ ಪುರಸ್ಕಾರ, ಯುನಿವರ್ಸಲ್ ಬುಕ್ ಆಫ್ ರೆಕಾರ್ಡ್, ಹೀಗೆ ಹಲವು ಪುರಸ್ಕಾರಗಳನ್ನ ಪಡೆದಿದ್ದಾನೆ. ಹುಬ್ಬಳ್ಳಿಯ ಸಿದ್ಧಾರ್ಥಗೌಡ ಪಾಟೀಲನಿಗೆ ಮತ್ತಷ್ಟು ಪ್ರೋತ್ಸಾಹ ದೊರೆತು ಜಗತ್ತಿನಾದ್ಯಂತ ಈತನ ಕೀರ್ತಿ ಹರಡಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯವೂ ಆಗಿದೆ..
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/06/2022 10:47 am