ಹುಬ್ಬಳ್ಳಿ: ಇತ್ತ ಮನೆಯಲ್ಲಿ ಸೈ.. ಅತ್ತ ಪ್ಯಾಶನ್ ಶೋದಲ್ಲೂ ಸೈ ಎಂದ ಮಹಿಳೆ. ಸದ್ಯ ಪ್ಯಾಶನ್ ಲೋಕದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ ಪಡೆದು ಹುಬ್ಬಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ...
ಎಸ್..ಹೀಗೆ ವಿವಿದ ಭಂಗಿಯಲ್ಲಿ ರ್ಯಾಂಪ್ ವಾಕ್ ಮಾಡಿ, ಸ್ಪರ್ಧೆಯಲ್ಲಿ ವಿಜೇತಳಾಗಿ ತಲೆಯ ಮೇಲೆ ಕಿರೀಟ ಹೊತ್ತು ನಿಂತಿರುವ ಈ ಸುಂದರಿಯ ಹೆಸರು ಅಶ್ವೀನಿ ಹರೀಶ್ ಸರಸಣ್ಣವರ. ಇವರು ಹುಬ್ಬಳ್ಳಿಯ ಸಹದೇವ ನಗರದ ನಿವಾಸಿ. ಪ್ರತಿಭಾ ಸೌಂಶಿಮಠ ಅವರು ಮಿಸೆಸ್ ಇಂಡಿಯಾ ಕರ್ನಾಟಕ- 2022 ಬೆಂಗಳೂರಿನಲ್ಲಿ ಆಯೋಜಿಸಿದ 22-40 ವಯೋಮಿತಿಯಲ್ಲಿ, ವಿವಿಧ ರಾಜ್ಯಗಳಿಂದ ಸುಮಾರು 36 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ಅಶ್ವೀನಿ ಹರೀಶ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ. ಸಬ್‌ಟೈಟಲ್ ಡ್ಯಾಜಲಿಂಗ್ ಸ್ಟಾರ್ ಮಿಸೆಸ್ ಇಂಡಿಯಾ ಕರ್ನಾಟಕ ಸ್ಥಾನ ಪಡೆದು ಹುಬ್ಬಳ್ಳಿಗೆ ಮಾಡಲಿಂಗದಲ್ಲಿ ಕೀರ್ತಿ ತಂದಿದ್ದಾರೆ..
ಒಟ್ಟಿನಲ್ಲಿ ಸಂಸಾರದ ಜೆಂಜಾಟದ ನಡುವೆಯೂ ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರುವ ಹುಬ್ಬಳ್ಳಿಯ ಅಶ್ವೀನಿ ಸರಸಣ್ಣವರ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂಬುದೆ ಹುಬ್ಬಳ್ಳಿ ಜನತೆ ಅಭಿಲಾಷೆ...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
19/08/2022 01:23 pm